
‘ಇದು ಬರ್ಲಿನ್ ! ಇದು ಜರ್ಮೇನಿಯಾ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಯುರೋಪ್ ಐತಿಹಾಸಿಕ ನಗರಗಳ ಪ್ರವಾಸ ಕೈಗೊಂಡಾಗ ಕಂಡ ಅಲ್ಲಿಯ ಐತಿಹಾಸಿಕ ಸ್ಥಳಗಳು ಮತ್ತು ಇತಿಹಾಸ ಕುರಿತು ರಚಿಸಿರುವ ಕೃತಿ. ಜರ್ಮನಿಯ ರಾಜಧಾನಿ ಬರ್ಲಿನ್ ಇತಿಹಾಸವೇ ರೋಚಕ. ಈ ಭೂಮಂಡಲದಲ್ಲಿರುವ ಯಾವುದೇ ನಗರಕ್ಕೂ ಬರ್ಲಿನ್ ಗೆ ಇರುವ ಪ್ರಕ್ಷುಬ್ಧ ಇತಿಹಾಸವಿಲ್ಲ ಎಂದಿದ್ದಾರೆ ಇತಿಹಾಸಕಾರರು. ಅದು ಎಷ್ಟು ವೇಗವಾಗಿ ಬಲಿಷ್ಠ ನಗರವಾಗಿ ಬೆಳೆಯಿತೇ ಅಷ್ಟೇ ವೇಗವಾಗಿ ಅವನತಿ ಕಂಡಿತು. ಅದು ತನ್ನ ಇತಿಹಾಸದುದ್ದಕ್ಕೂ ವಿಜಯೋತ್ಸವದ ಪರಕಾಷ್ಠೆ ಆಚರಿಸಿ ಪರಾಭವದ ಅವಮಾನಗಳಿಂದ ಕಳೆಗುಂದಿತು. ಫ್ರೆಡೆರಿಕ್ ಜಿ ಗ್ರೇಟ್ ನು 30 ವರ್ಷಗಳ ಯುದ್ಧದಲ್ಲಿ ಜಯ ಗಳಿಸಿ ವಿಜೃಂಭಿಸಿದರೂ ಫ್ರಾನ್ಸ್ ಚಕ್ರಾಧಿಪತಿ ನೆಪೋಲಿಯನ್ ಕಾಲ್ತುಳಿತಕ್ಕೆ ಸಿಕ್ಕಿ ಬರ್ಲಿನ್ ಪರದಾಡಿತು. ಇಂತಹ ನಗರದ ಹುಟ್ಟು, ಅಳಿವು ಮತ್ತು ಮರು ಹುಟ್ಟಿನ ಇತಿಹಾಸವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.