ಯಾನ ಸಂಸ್ಕೃತಿ

Author : ಶಾಂತಾ ನಾಗರಾಜ್

Pages 200

₹ 200.00




Year of Publication: 2021
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12 ನೇ ಮುಖ್ಯರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು 560010
Phone: 9945939436

Synopsys

ಲೇಖಕಿ ಶಾಂತಾ ನಾಗರಾಜ್ ಅವರ ’ಯಾನಸಂಸ್ಕೃತಿ’ ಕೃತಿಯು ಪ್ರವಾಸ ಕಥನವಾಗಿದೆ. ಈ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಣಗೊಂಡಿದೆ. 'ಯಾನ ಸಂಸ್ಕೃತಿ' ಭೌತಿಕ ವಿವರಗಳೊಂದಿಗೆ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಕಾಣುತ್ತದೆ. ವಿಮರ್ಶಾಪರವಾದ ಒಲವಿದ್ರೂ ಅನ್ಯ ದೇಶೀಯರನ್ನು ಮನುಷ್ಯರನ್ನಾಗಿಯೇ ಕಾಣುವ ನಿಲುವು ಇಲ್ಲಿದೆ, ಅಂತೆಯೇ , ಇದು ಬರಿಯ ಪ್ರವಾಸ ಕಥನವಲ್ಲ, ಸಂಸ್ಕೃತಿಯ ಸಹಾನುಭೂತಿಯ ಅಧ್ಯಯನವಾಗಿದೆ. ಈ ಪುಸ್ತಕಕ್ಕೆ ರುಚಿಯೂ, ಸುಲಲಿತವಾಗಿ ಓದಿಕೊಂಡು ಹೋಗುವ ಗುಣವೂ ಮತ್ತು ಎಲ್ಲೋ ಆಳದಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಸುಪ್ತಶಕ್ತಿಯೂ ಲಭಿಸಿವೆ. ಅರಿವನ್ನು ವಿಸ್ತರಿಸುವ , ಗಹನವಾದ ವಿಷಯವಿದ್ದೂ, ರುಚಿ ಹಿಡಿಸುವ, ವಿಶ್ಲೇ಼ಷಣೆ ನಡೆಸಿಯೂ, ರಸಸ್ಪಂದಿಯಾಗುವ ಮೌಲಿಕತೆ ಈ ಕಥಾನಕಕ್ಕೆ ಇದೆ’ ಎಂದು ಲೇಖಕಿ ಅಭಿಪ್ರಾಯಪಟ್ಟಿದ್ದಾರೆ. .

About the Author

ಶಾಂತಾ ನಾಗರಾಜ್
(10 October 1943)

ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ.  ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ,  ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ...

READ MORE

Related Books