
ಪೋರಬಂದರ್, ಗುಜರಾತ್ ರಾಜ್ಯದ ಒಂದು ಪ್ರಾಚೀನ ಬಂದರು ನಗರವಾಗಿದೆ. ಕತಿಬಾರ್ ನ ಕರಾವಳಿ ತೀರದಲ್ಲಿರುವ ಈ ನಗರವು ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾಗಿದೆ. ಹೊನ್ಕಲ್ ಅವರು ಗುಜರಾತನ ಪ್ರವಾಸದ ಕುರಿತು ಗಾಂಧೀಯ ನಾಡಿನಲ್ಲಿ ಎಂಬ ಪ್ರವಾಸಕಥನವಿದು.
ಪೋರಬಂದರ ಮನೆಯಿಂದ ಪ್ರಾರಂಭವಾಗಿ ಸಬರಮತಿ ಆಶ್ರಮ ದವರೆಗಿನ ಗಾಂಧೀಜಿಯ ಬದುಕನ್ನು ಹಾಗೂ ಸಿದ್ದರಾಮ ಹೊನ್ಕಲ್ ಅವರು ತಾವು ಸುತ್ತಾಡಿದ ಗಾಂಧೀಯ ನಾಡಿನಲ್ಲಿನ ಸ್ಥಳಗಳನ್ನು ತುಂಬ ಸೊಗಸಾಗಿ ಚಿತ್ರಿಸಿದ್ದಾರೆ. ಈ ಕೃತಿಗೆ ಬೆಂಗಳೂರಿನ ಅತಿಮಬ್ಬೆ ಪುರಸ್ಕಾರ ಹಾಗೂ ಕಲಬುರ್ಗಿ ಸಂಸ್ಥೆಯೊಂದರ ಶ್ರೀ ವಿಜಯ ಪುರಸ್ಕಾರ ದೊರೆತು ಕನಿಷ್ಠ ಹತ್ತು ಸಾವಿರ ಪ್ರತಿಗಳು ಮಾರಾಟವಾಗಿವೆ. ಸೋಲಾಪುರ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.
©2025 Book Brahma Private Limited.