ಅಮ್ ಸ್ಟರ್ ಡ್ಯಾಮ್ ನಿಂದ ಅವಿಗ್ನಾನ್ ಕ್ಕೆ

Author : ಆಗುಂಬೆ ಎಸ್. ನಟರಾಜ್‌

Pages 328

₹ 250.00




Year of Publication: 2014
Published by: ಹಂಸ ಪ್ರಕಾಶನ
Address: 947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 08023383004

Synopsys

‘ಅಮ್ ಸ್ಟರ್ ಡ್ಯಾಮ್ ನಿಂದ ಅವಿಗ್ನಾನ್ ಕ್ಕೆ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಕಥನ. ಪಶ್ಚಿಮ ಯುರೋಪ್ ನ ಪ್ರಸಿದ್ಧ ಐತಿಹಾಸಿಕ ನಗರಗಳು ವಿಶ್ವದ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ವಿಶಿಷ್ಟ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯ ಬೆಳವಣಿಗೆಗೆ ಸಾಕ್ಷಿಯಾಗಿ ನಿಂತಿವೆ.

ಈ ನಗರಗಳಲ್ಲಿ ಅನೇಕ ಅದ್ಭುತ ಅರಮನೆಗಳು, ಸೌಧಗಳು, ಚರ್ಚ್ ಗಳು ನಿರ್ಮಿಸಲ್ಪಟ್ಟಿದ್ದರೆ, ಅವು ಇತಿಹಾಸ ಪ್ರಸಿದ್ಧ ರಾಜ ಮಹಾರಾಜರು, ರಾಜಕುಮಾರರು, ಸಾಹಿತಿಗಳು, ಕವಿಗಳು, ಜ್ಞಾನಿ, ವಿಜ್ಞಾನಿಗಳು, ತತ್ವಜ್ಞಾನಿಗಳು, ಕಲಾಕಾರರು, ಶಿಲ್ಪಕಲಾಕಾರರು, ವಾಸ್ತುಶಿಲ್ಪಿಗಳು, ವಿಶ್ವವಿದ್ಯಾಲಯಗಳು, ವಿದ್ಯಾಕೇಂದ್ರಗಳಿಗೆ ಪ್ರಸಿದ್ಧಿಗೊಂಡಿವೆ. ಈ ನಗರಗಳು ಯೂರೋಪ್ ನ ಇತಿಹಾಸದಲ್ಲಿ ಬಹು ಮುಖ್ಯ ಪಾತ್ರವಹಿಸಿ ಪ್ರಖ್ಯಾತವಾಗಿವೆ. ಅವುಗಳ ಸಂಕ್ಷಿಪ್ತ ವಿವರಣೆ ಈ ಗ್ರಂಥದಲ್ಲಿದೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books