ನೋಡು ಬಾ ನೇಪಾಳ

Author : ಸಂಗಮೇಶ ತಮ್ಮನಗೌಡ್ರ

Pages 56

₹ 25.00




Year of Publication: 2001
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ನೇಪಾಳ ಸೇರಿದಂತೆ ಇತರೆ ದೇಶಗಳಿಗೂ ಕೈಗೊಂಡ ಪ್ರವಾಸದ ಭಾಗವಾಗಿ ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಪ್ರವಾಸ ಕಥನ-ನೋಡು ಬಾ ನೇಪಾಳ. ಶ್ರೀಲಂಕಾ, ಲಕ್ಷದ್ವೀಪ, ಮಾಲ್ಡೀವ್ ದ್ವೀಪಗಳು, ಮುಂಬೈ, ರಾಜಸ್ತಾನ, ತಮಿಳುನಾಡು, ಕೇರಳ, ಗೋವಾ ಹೀಗೆ ಪ್ರವಾಸದಲ್ಲಿರುವಾಗ ತಾವು ಕಂಡಿದ್ದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.

ಐಷಾರಾಮಿ ಬದುಕಿಗೆ ಪ್ರವಾಸ ಒಂದು ವರದಾನ, ತೆಂಗುಗಳ ಪುಣ್ಯಭೂಮಿ ಕೇರಳ, ನಡುಗಡ್ಡೆಗಳ ನೆಲೆ ಲಕ್ಷದ್ವೀಪ, ಓಹೋ! ಸೌಂದರ್ಯ ಸಿರಿಯ ಶ್ರೀಲಂಕಾ, ಲಕ್ಷ್ಮೇಶ್ವರದಿಂದ ಮುಂಬೈ ಕಡೆಗೆ ಹೀಗೆ ವಿವಿಧ ಅಧ್ಯಾಯಗಳಡಿ ತಮ್ಮ ಪ್ರವಾಸದ ಅನುಭವವನ್ನು ಸರಳವಾಗಿ ಅಷ್ಟೆ ಮನಮೋಹಕವಾಗಿ ಚಿತ್ರಿಸಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books