ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ

Author : ವಿಜಯಾ ಸುಬ್ಬರಾಜ್

Pages 89

₹ 50.00




Year of Publication: 2000
Published by: ರಮಣಶ್ರೀ ಪ್ರಕಾಶನ
Address: 87, ಗುರುಕೃಪ, ಗಿರಿನಗರ 3ನೇ ಹಂತ, ಬೆಂಗಳೂರು- 560085

Synopsys

ಡಾ. ವಿಜಯಾ ಸುಬ್ಬರಾಜ್ ಅವರ ಪ್ರವಾಸ ಕಥನ ‘ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ’. ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಅವರಿಗಾದ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಹದಿಹರೆಯದ ಹುಡುಗರ ಸಹವಾಸದಲ್ಲಿ ನಾನು ಜೀವನದ ಗೆಲುವಿನ ಮುಖವನ್ನು ಕಾಣಲು ಸಾಧ್ಯವಾಯ್ತು ಎನ್ನುತ್ತಾರೆ ಡಾ. ವಿಜಯಾ ಸುಬ್ಬರಾಜ್. ಕಷ್ಟದ ಕ್ಷಣಗಳನ್ನೂ ಆ ವಯಸ್ಸಿನ ಉತ್ಸಾಹ, ಲವಲವಿಕೆಗಳು ನನ್ನನ್ನು ಹೇಗೆ ಜೀವಂತವಾಗಿ ಇಡಬಲ್ಲವು ಎಂಬುದನ್ನೂ ಗ್ರಹಿಸಿ, ನನ್ನ ದುಗುಡಗಳನ್ನು ದೂರವಿಡುವುದನ್ನು ಕಲಿತೆ, ನಮಗರಿವಿಲ್ಲದೇ ನಾವು ಆ ಹದಿಹರೆಯದವರಿಂದ ಹಲ ಕೆಲವು ಕ್ಷಣಗಳಲ್ಲಿ ಗಂಭೀರ ಮತ್ತು ವಾಸ್ತವ ಸತ್ಯಗಳನ್ನು ಕಲಿಯಬಹುದೆಂಬ ಮನವರಿಕೆಯ ಅರಿವಿನೊಂದಿಗೆ ಬೆಳೆಯಲು ಸಾಧ್ಯವಾಯಿತು ಎಂಬುದು ಲೇಖಕಿ ಡಾ. ವಿಜಯಾ ಸುಬ್ಬರಾಜ್ ಅವರ ಅನಿಸಿಕೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books