ಅಂಗೈಯಲ್ಲಿ ಯೂರೊ ಅಮೆರಿಕ

Author : ಅನುಪಮಾ ನಿರಂಜನ

₹ 69.00




Year of Publication: 2019
Published by: ಡಿ.ವಿ.ಕೆ. ಮೂರ್ತಿ
Address: #1498/1, ರಾಮಯ್ಯ ರೋಡ್, ಕೃಷ್ಣಮೂರ್ತಿ ಪುರಂ, ಮೈಸೂರು-570004

Synopsys

ಖ್ಯಾತ ಲೇಖಕಿ ಡಾ. ಅನುಪಮಾ ನಿರಂಜನ ಅವರ ‘ಅಂಗೈಯಲ್ಲಿ ಯೂರೊ ಅಮೆರಿಕ’ ಕೃತಿಯು ಪ್ರವಾಸಕ ಥನವಾಗಿದೆ. ‘1981 ರಲ್ಲಿ ಯುರೋಪ್ ಮತ್ತು ಅಮೆರಿಕ ಪ್ರವಾಸ ಮಾಡಿ ಬಂದೆ. ಅಲ್ಲಿನ ನೆನಪುಗಳ ಹಂದರವೇ ಈ ಕೃತಿಯಾಗಿದೆ. ಸಾಹಿತ್ಯದ ಮೂಲಕ ಜಗತ್ತಿನ ಎಲ್ಲ ದೇಶಗಳ ಹಾಗೂ ಜನರ ಪರಿಚಯ ನನಗಿದ್ದೇ ಇತ್ತು. ಆದರೆ, ಅವರನ್ನು ಕಣ್ಣಾರೆ ಕಾಣುವ, ಅವರು ಬದುಕುವ ಪರಿಸರವನ್ನು ಅವಲೋಕಿಸುವ, ತನ್ಮೂಲಕ ಆ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕೆಂಬ ಆಸಕ್ತಿ. ಈ ಹಿಂದೆ 1975ರಲ್ಲಿ ಬರ್ಲಿನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನಲ್ಲಿ ಭಾಗವಹಿಸಲು ಹೋಗಿದ್ದೆ. ಆಗ ಪೂರ್ವ ಜರ್ಮನಿ, ಪೋಲೆಂಡ್, ಮಾಸ್ಕೋ ಇವೆಲ್ಲಾವುಗಳನ್ನು ಕಾಣುವಂತಹ ಅವಕಾಶ ಒದಗಿತ್ತು. ಈ ಬಾರಿ ಪಶ್ಚಿಮ ಯೂರೋಪ್ ಅಮೆರಿಕಾ ಪ್ರವಾಸ ಹೊರಟವಳು ನಾನೊಬ್ಬಳೇ ಆದುದರಿಂದ ಪ್ರವಾಸಿ ಸಂಸ್ಥೆಯೊಂದರ ನೆರವು ಪಡೆಯಬೇಕಾಯಿತು ಎಂಬುದರ ಜೊತೆಗೆ ಇನ್ನಷ್ಟು ವಿಚಾರಗಳನ್ನು ಲೇಖಕಿ ಇಲ್ಲಿ ವಿಶ್ಲೇಷಿಸುತ್ತಾ ಹೋಗಿದ್ದಾರೆ.

About the Author

ಅನುಪಮಾ ನಿರಂಜನ
(17 May 1934 - 15 February 1991)

ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು.  ಕಥಾಸಂಕಲನಗಳು- ...

READ MORE

Related Books