ನಕ್ಷತ್ರಗಳ ಸುಟ್ಟ ನಾಡಿನಲ್ಲಿ

Author : ಭಾರತಿ ಬಿ ವಿ

Pages 264

₹ 300.00




Year of Publication: 2020
Published by: ಬಹುರೂಪಿ ಪ್ರಕಾಶನ
Address: ಎಂಬೆಸಿ ಸೆಂಟರ್, 111, ಫಸ್ಟ್ ಫ್ಲೋರ್, ಕ್ರೆಸೆಂಟ್ ರೋಡ್, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು- 560001
Phone: 7019182729

Synopsys

ಲೇಖಕಿ ಬಿ.ವಿ. ಭಾರತಿ ಅವರ ಪ್ರವಾಸ ಕಥನ-'ನಕ್ಷತ್ರಗಳ ಸುಟ್ಟ ನಾಡಿನಲ್ಲಿ'. ಈ ಕೃತಿಯು ನಾಜಿಗಳ ಕ್ರೌರ್ಯ, ಯಹೂದಿಗಳ ಸಾವು- ನೋವುಗಳ ಇತಿಹಾಸವಿರುವ ಪೋಲೆಂಡ್ ದೇಶಕ್ಕೆ ಭೇಟಿ ನೀಡಿ ಅಲ್ಲಿಯ ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಆಕರ್ಷಕ ನಿರೂಪಣಾ ಶೈಲಿಯಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ. ಇಲ್ಲಿ ಪಯಣಾಂಕುರ, ಈ ಹಿಟ್ಲರ್ ಕಾಲುಗುಣ ಸರಿಯಿಲ್ಲ ಕಣ್ರೀ, ಅಂತೂ ಇಂತೂ ಟೇಕಾಫ್, ನಾವು ಬಂದೆವಾ..ಪೋಲೆಂಡ್ ನೋಡಲಿಕ್ಕೆ, ಹುಚ್ಚು ಹಿಟ್ಲರನ ಹತ್ತು ಮುಖಗಳು, ಎಡವಟ್ಟಣ್ಣಯ್ಯನ ಊರಿನಲ್ಲಿ, ಜ್ಯೂಗಳ ವಠಾರದಲ್ಲಿ, ಇಷ್ಟು ಹೇಳಲೇಬೇಕಿತ್ತು, ಅತ್ಯಂದ ಆರಂಭ, ಜಗತ್ತಿನ ಅತಿ ದೊಡ್ಡ ಸ್ಮಶಾನ ಆಶ್ವಿಟ್ಜ್ ನಲ್ಲಿ, ಹಾಲೋಕಾಸ್ಟ್, ಶಿಂಡ್ಲರ್ ಎಂಬ ಅಪ್ಪಟ ಮನುಷ್ಯ, ವಾರ್ಸಾ ಎಂಬ ಫೀನಿಕ್ಸ್, ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರೂ, ಮುಗಿಯದ ಯುದ್ಧ, ದೋ ವಿದ್ಜೇನಿಯಾ ಪೋಲೆಂಡ್ ಎಂಬ ಹದಿನಾರು ಅನುಭವ ಕಥನಗಳು ಸಂಕಲನಗೊಂಡಿವೆ. 

About the Author

ಭಾರತಿ ಬಿ ವಿ

ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.  ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್‌ ಕವಿತೆಗಳು', 'ಜಸ್ಟ್‌ ಮಾತ್‌ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ...

READ MORE

Related Books