ಪ್ರವಾಸಿ ಕಂಡ ವಿಜಯನಗರ

Author : ಬಿ.ಎ. ವಿವೇಕ ರೈ

Pages 306

₹ 200.00




Year of Publication: 2014
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯಹಂಪಿ, - 583276

Synopsys

ವಿಜಯನಗರ ಸಾಮ್ರಾಜ್ಯಕ್ಕೆ ಅಂದಿನ ಕಾಲದಿಂದಲೂ ಅನೇಕ ವಿದೇಶಿ ಪ್ರವಾಸಿಗರು ಬಂದು ಹೋಗಿದ್ದಾರೆ. ಅವರು ಕಣ್ಣಾರೆ ಕಂಡು ದಾಖಲಿಸಿದ ಮಾಹಿತಿಗಳನ್ನು ಆಧರಿಸಿ ಬಿ.ಎ. ವಿವೇಕ ರೈ ಅವರು ‘ಪ್ರವಾಸಿ ಕಂಡ ವಿಜಯನಗರ’ ಕೃತಿಯನ್ನು ರಚಿಸಿದ್ದಾರೆ. ಪ್ರವಾಸಿಗರು ವಿಜಯನಗರದ ಬಗ್ಗೆ ದಾಖಲಿಸಿರುವ ಮಾಹಿತಿಗಳು ನಿಜಕ್ಕೂ ಕುತೂಹಲಕರ. ಅಂಥ ಪ್ರವಾಸಿಗಳ ಅನಿಸಿಕೆಯ ತುಣುಕುಗಳೇ ಇಲ್ಲಿಯ ಬರೆಹಗಳು.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books