ವಿಂಧ್ಯ ನರ್ಮದೆಯರ ನಾಡಿನಲ್ಲಿ ಪ್ರವಾಸ

Author : ಪಿ.ವಿ.ಕೃಷ್ಣಮೂರ್ತಿ

Pages 87

₹ 25.00




Year of Publication: 1999
Published by: ಕರ್ನಾಟಕ ಸಾಹಿತ್ಯ ಅಕಾದೆಮಿ
Address: ಕನ್ನಡ ಭವನ, ಬೆಂಗಳೂರು - 560 002

Synopsys

ಕರ್ನಾಟಕ ಸಾಹಿತ್ಯ ಅಕಾದೆಮಿಯ ಪ್ರವಾಸ ಅನುದಾನ ಯೋಜನೆ ಅಡಿಯಲ್ಲಿ ಲೇಖಕ ಪಿ.ವಿ ಕೃಷ್ಣಮೂರ್ತಿ ಅವರು ಕೈಗೊಂಡ ಮಧ್ಯಪ್ರದೇಶ ರಾಜ್ಯದ ಪ್ರವಾಸ ಕಥನ ‘ವಿಂಧ್ಯ ನರ್ಮದೆಯರ ನಾಡಿನಲ್ಲಿ’ ಎಂಬುದು. ಜಬಲ್ ಪುರ, ಅರವತ್ತನಾಲ್ಕು ಯೋಗಿನಿಯರ ಕೋಟೆ ಭೇರಾಘಾಟ್, ಸಾಂಚಿ, ಉದಯಗಿರಿ, ಭೋಜ್ ಪುರ, ಭೀಮ್ ಬೆಟ್ಕ, ಭೋಪಾಲ್ , ಉಜ್ಜಯಿನಿ, ಇಂದೂರು, ಧಾರ್, ಬಾಘ್ ಗುಹಾಲಯ, ದಿಗಂಬರ ಸಿದ್ಧಕ್ಷೇತ್ರ ಬಾವನಗಜಾ ಮೊದಲಾದ ಸ್ಥಳಗಳಲ್ಲಿನ ಚಾರಿತ್ರಿಕ ಮಹತ್ವದ ಸಂಗತಿ ಹಾಗೂ ಸಂದರ್ಶಿಸಿದ ವ್ಯಕ್ತಿ, ವಸ್ತುಸಂಗ್ರಹಾಲಯಗಳ, ಪ್ರಚ್ಯಾವಶೇಷ ಇತ್ಯಾದಿ ವಿಶೇಷತೆಗಳ ಸ್ವಾರಸ್ಯ ವಿವರಣೆಗಳಿಂದ ಕೂಡಿದೆ.

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books