
`ಅಪೂರ್ವ’ ಕೆ. ಎಂ. ಸೀತಾರಾಮಯ್ಯ ಅವರ ಪ್ರವಾಸ ಕಥನವಾಗಿದೆ. ಅತ್ಯಂತ ಗೌರವಾನ್ವಿತ ಅತಿಥಿಯಂತೆ ಅಮೆರಿಕಕ್ಕೆ ಭೇಟಿ ನೀಡಿದ ಲೇಖಕರು ತಮ್ಮ ಅಲ್ಲಿನ ಅಪೂರ್ವ ಅನುಭವ ಸಂಗ್ರಹಿಸಿದ ಮಾಹಿತಿಗಳನ್ನು ಉತ್ಸಾಹದಿಂದ ನಮಗೆ ತಿಳಿಸುತ್ತಾರೆ. ಉತ್ತಮವಾದ ಅಲ್ಲಿನ ವ್ಯವಸ್ಥೆಯನ್ನೆಲ್ಲ ಮುಕ್ತಕಂಠದಿಂದ ಶ್ಲಾಘಿಸಿ ಸ್ವದೇಶವನ್ನು ಎಲ್ಲೂ ತೆಗಳದೆ ನಾವೆಷ್ಟು ಹಿಂದಿದ್ದೇವೆಂದೂ ವಿಷಾದದಿಂದ ಲೆಕ್ಕ ಹಾಕುತ್ತಾರೆ. ವಿದೇಶವೆಷ್ಟು ಹಿತವೋ ಅದಕ್ಕಿಂತ ಹಿತವಾದ ನುಡಿ : ''ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ' ಎಂಬ ಅರ್ಥಪೂರ್ಣ ಮುಕ್ತಾಯ ಹಾಡಿದ್ದಾರೆ.
©2025 Book Brahma Private Limited.