
‘ಚಾರ್ ಧಾಮ್’ ಕೃತಿಯು ಲೇಖಕಿ ಹೇಮಮಾಲಾ ಬಿ. ಅವರ ಪ್ರವಾಸ ಕಥನ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಕೇಶವ ಪ್ರಸಾದ್ ಅವರು, ‘ಮಹಾಭಾರತದ ನಂಟನ್ನು ಹೊಂದಿರುವ ಚಾರ್ ಧಾಮ್ ಉತ್ತರಾಖಂಡದ ಪ್ರವಾಸೋದ್ಯಮದಲ್ಲಿ ಹಾಸುಹೊಕ್ಕಾಗಿದೆ. ಗಂಗೋತ್ರಿ, ಯುಮುನೋತ್ರಿ, ಕೇದಾರ್ ನಾಥ್ ಮತ್ತು ಬದರಿನಾಥದ ದರ್ಶನ ಹಿಂದೂಗಳಿಗೆ ಜೀವನ ಸಾರ್ಥಕತೆಯನ್ನು ಮೂಡಿಸುತ್ತದೆ. ಪೌರಾಣಿಕ, ಧಾರ್ಮಿಕ, ಆಧ್ಯಾತ್ಮಿಕ ಅನುಭವ, ಅನುಭೂತಿಯ ಜತೆಗೆ ನಿಸರ್ಗದ, ಜನ ಜೀವನದ ವಿಶಿಷ್ಟ ದರ್ಶನ ಅಲ್ಲಿ ಲಭಿಸುತ್ತದೆ. ಚಾರಣಿಗರಿಗಂತೂ ಇದು ಧರೆಗಿಳಿದ ಸ್ವರ್ಗವೆನ್ನುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಕರ್ನಾಟಕದಿಂದ ಕೂಡ ವರ್ಷದಿಂದ ವರ್ಷಕ್ಕೆ ಚಾರ್ ಧಾಮ್ ಯಾತ್ರಿಕರ ಸಂಖ್ಯೆ ವೃದ್ದಿಸುದೆ’ ಎಂದು ಈ ಪ್ರವಾಸ ಕಥನದ ವೈಶಿಷ್ಟ್ಯವನ್ನು ಶ್ಲಾಘಿಸಿದ್ದಾರೆ.
©2025 Book Brahma Private Limited.