
ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ ಅವರ ಕೃತಿ-ಹಸಿರು ಹಂಪೆ. ಜನಸಾಮಾನ್ಯರ ಕಥೆಗಳು ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಕೃತಿಯು ಪ್ರವಾಸ ಕಥನ ಮಾದರಿಯಲ್ಲಿದೆ. ಕೆರೆ ಕಟ್ಟೆ, ಪುಷ್ಕರಣಿ, ಕಾಲುವೆಗಳ ನಿರ್ಮಾಣಗಳ ಮೂಲಕ ಸದಾ ನೀರಿನ ಅಭಾವ ಆಗದಂತೆ ನೋಡಿಕೊಂಡಿರುವ ವಿಜಯನಗರ ಸಾಮ್ರಾಜ್ಯದ ಆಡಳಿತ ವೈಖರಿ-ವೈಭವದ ಚಿತ್ರಣ ನೀಡುವ ಕೃತಿ ಇದು. ವಿಜಯವಿಠ್ಠಲ ದೇವಸ್ಥಾನದಲ್ಲಿ ಸಂಗೀತ ಹೊಮ್ಮಿಸುವ ಕಂಬಗಳು, ರಂಗ ಮಂಟಪದ ಬೆರಗು, ಪುರಂದರದಾಸರ ಪರಿಚಯ, ಕೃಷ್ಣದೇವರಾಯ ಮತ್ತು ರಾಣಿ ಚಿನ್ನಮ್ಮ ದೇವಿ ಪ್ರೇಮ ಪ್ರಸಂಗ, ಮೈನವಿರೇಳಿಸುವ ರಾಯಚೂರು ಯುದ್ಧ, ಕಂದಾಯ ವ್ಯವಸ್ಥೆ ಎಲ್ಲವೂ ಎಷ್ಟೊಂದು ಸುಸೂತ್ರವಾಗಿ ನಡೆಯುತ್ತಿತ್ತು ಎಂಬುದರ ಸಂಪೂರ್ಣ ಮಾಹಿತಿ ಈ ಕೃತಿಯ ಹೆಗ್ಗಳಿಕೆ.
©2025 Book Brahma Private Limited.