
'ಆಹಾರದಿಂದ ಆರೋಗ್ಯದೆಡೆಗೆ’ ಅಣ್ಣಪ್ಪ ಅ ಪಾಂಗಿ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಈ ಕೃತಿಯಲ್ಲಿ ಸಾಮಾನ್ಯವಾಗಿ ಜನರಿಗೆ ನಾವು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ತಿಳಿ ಹೇಳುವ ಉದ್ದೇಶದಿಂದ ಸರಳಗನ್ನಡದಲ್ಲಿ ಬರೆದಿದ್ದಾರೆ. ಪ್ರತಿಯೊಂದು ಆಹಾರಗಳು, ತಮ್ಮದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿ, ಹಾಲು ಹಾಗೂ ಹಾಲಿನ ಉತ್ಪನ್ನಗಳು, ವಿವಿಧ ಖಾದ್ಯ ತೈಲಗಳು ಮತ್ತು ಪೇಯಗಳು ಇವೆಲ್ಲವುಗಳಲ್ಲಿ ಇರುವ ಪೋಷಕಾಂಶಗಳು, ಕ್ಯಾಲೊರಿ ಮತ್ತು ಇತರ ವಿಶೇಷತೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಯುವಂತೆ ಹಲವಾರು ಚಿತ್ರಗಳು, ಚಾರ್ಟ್, ಮತ್ತು ಟೇಬಲ್ ಗಳ ಮುಖಾಂತರ ತಿಳಿಸಲು ಪ್ರಯತ್ನಿಸಲಾಗಿದೆ . ಜೊತೆಗೆ ಪ್ರತಿಯೊಂದು ಆಹಾರ ಪದಾರ್ಥವು ಮಧುಮೇಹಿ ಗಳಿಗೆ ಸೂಕ್ತವಾಗಿದೆಯೇ ? ಹಾಗೂ ಅವರು ಸೇವಿಸುವ ಪ್ರಮಾಣಗಳನ್ನು ಕೂಡ ವಿವರಿಸಲಾಗಿದೆ. ಹಣ್ಣುಗಳು ಹಾಗೂ ಮಧುಮೇಹ ಎಂಬ ಒಂದು ಪೂರ್ಣ ಅಧ್ಯಾಯವನ್ನು ಮಧುಮೇಹಿ ಗಳ ಮಾಹಿತಿಗಾಗಿ ಬರೆಯಲಾಗಿದೆ. ಪ್ರತಿ ಅಧ್ಯಾಯದಲ್ಲಿಯೂ, ಅವರಿಗಾಗಿ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಒಟ್ಟಾರೆ ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾದ ಕೈಪಿಡಿಯಾಗಿದೆ ಎಂದು ಹೇಳಬಹುದು.
©2025 Book Brahma Private Limited.