ಬಂಜೆತನಕ್ಕೆ ವೈಜ್ಞಾನಿಕ ಪರಿಹಾರ - ಪ್ರನಾಳಶಿಶು

Author : ಎಂ.ಜೆ. ಸುಂದರ್ ರಾಮ್

Pages 115

₹ 150.00

Year of Publication: 2019
Published by: ಎಂ.ಜೆ. ಸುಂದರ್ ರಾಮ್
Address: 308, 1ನೇ ಸಿ ಕ್ರಾಸ್, 3ನೇ ಮುಖ್ಯರಸ್ತೆ, 6ನೇ ಬ್ಲಾಕ್, 2ನೇ ಫೇಸ್, ಬಿಎಸ್.ಕೆ, 3ನೇ ಸ್ಟೇಜ್, ಬೆಂಗಳೂರು- 560 085
Phone: 9901853160

Synopsys

ಪುಸ್ತಕದ ಪರಿಚಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ದೇವರೇ ಕಾರಣ ಎಂದು ಮೂಢವಾಗಿ ನಂಬುವವರು ಭಾರತೀಯರು. ಹೊಸದಾಗಿ ಮದುವೆಯಾದ ಹೆಣ್ಣುಮಗಳು ಒಂದು ವರ್ಷದೊಳಗೆ ಮಗು ಹೆರದಿದ್ದರೆ ಅವಳಿಗೆ ಗ್ರಹಚಾರ ಕಾದಿದೆಯೆಂದು ಅರ್ಥ. ಅವಳ ಅತ್ತೆಗೆ, ತನ್ನ ಮಗನ ಮೇಲೆ ಯಾವ ದೋಷವಾಗಲಿ ಕಾಣಬರುವುದಿಲ್ಲ. ಆದರೆ ಸೊಸೆಯಲ್ಲಿ ಏನೋ ಕೊರತೆಯಿದೆ, ದೋಷವಿದೆ, ಅವಳು ಹಿಂದಿನ ಜನ್ಮದಲ್ಲಿ ಏನೋ ಪಾಪ ಮಾಡಿದ್ದಾಳೆ. ಅದಕ್ಕಾಗಿಯೇ ದೇವರು ಅವಳಿಗೆ ಶಾಪ ಕೊಟ್ಟಿದ್ದಾನೆ ಎಂದೆಲ್ಲ ಅವಳನ್ನು ಮೂದಲಿಸಿ, ಅವಳೊಡನೆ ನಿಷ್ಠುರವಾಗಿ ನಡೆದುಕೊಳ್ಳುತ್ತಾಳೆ. ಸಮಾಜವೂ ಅವಳನ್ನು ಪಾಪಿ, ಅಪರಾಧಿ ಎಂದೆಲ್ಲ ಆಡಿಕೊಳ್ಳುತ್ತದೆ. ಬಂಜೆತನ ದೇವರ ಶಾಪವಲ್ಲ ಆದರೆ ಸಂತಾನೋತ್ಪತ್ತಿ ವ್ಯೂಹದಲ್ಲಿ ಕಂಡುಬರುವ ತಾತ್ಕಾಲಿಕ ನ್ಯೂನತೆಯೇ ಇದಕ್ಕೆ ಕಾರಣ; ಈ ನ್ಯೂನತೆಯನ್ನು ಸರಿಪಡಿಸಿದರೆ ಬಂಜೆ ಹೆಣ್ಣುಮಗಳು ಸಹಜವಾಗಿ ಮಗುವನ್ನು ಹಡೆದುಕೊಳ್ಳುತ್ತಾಳೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇಂಗ್ಲೆಂಡಿನ ಡಾ|| ರಾಬರ್ಟ್ ಎಡ್‍ವಡ್ರ್ಸ್ ಎಂಬ ಜೀವಶಾಸ್ತ್ರಜ್ಞ ಸಂಶೋಧಕರು, ಪ್ಯಾಟ್ರಿಕ್ ಸ್ಟೆಪ್‍ಟೊ ಎಂಬ ವೈದ್ಯರ ಜೊತೆಗೂಡಿ, ಬಂಜೆತನದ ಬಗ್ಗೆ ಸಂಶೋಧನೆ ನಡೆಸಿ, ಮೊಟ್ಟಮೊದಲ ಬಾರಿಗೆ, ಹೆಣ್ಣು ಮಗಳ ದೇಹದ ಹೊರಗೆ ಮಗುವೊಂದನ್ನು ಸೃಷ್ಟಿಸಿದರು. ಹೆಣ್ಣು ಅಥವ ಗಂಡಿನ ಸಂತಾನೋತ್ಪತ್ತಿ ವ್ಯೂಹದಲ್ಲಿ ಒಡಹುಟ್ಟಿದ ರೋಗವಿದ್ದರೆ ಪುರುಷಾಣು ಮತ್ತು ಅಂಡಾಣುಗಳು ಮಿಲನವಾಗುವ ಸಾಧ್ಯತೆಯಿರುವುದಿಲ್ಲವಾದ್ದರಿಂದ ಮಗುವಾಗುವ ಸಾಧ್ಯತೆಯೂ ಇರುವು ದಿಲ್ಲ. ಇಂತಹ ತಾತ್ಕಾಲಿಕ ರೋಗಗಳನ್ನು ಔಷÀಧಗಳ ಮೂಲಕವೋ ಅಥವ ಶಸ್ತ್ರಚಿಕಿತ್ಸೆಯ ಮೂಲಕವೋ ಸರಿಪಡಿಸಿದರೆ ಇಂತಹ ದಂಪತಿಗಳೂ ಇತರರಂತೆ ಸಹಜ ರೀತಿಯಲ್ಲಿ ಮಕ್ಕಳನ್ನು ಹೆತ್ತು ಸಮಾಜದಲ್ಲಿ ಗೌರವದಿಂದ ಬಾಳನ್ನು ಸಾಗಿಸಬಹುದು ಎಂದು ಈ ಇಬ್ಬರು ವಿಜ್ಞಾನಿಗಳು ತೋರಿಸಿಕೊಟ್ಟರು. ಅನೇಕ ವ್ಯರ್ಥ ಪ್ರಯತ್ನಗಳ ನಂತರ ಛಲದಿಂದ ತಮ್ಮ ಸಂಶೋಧನೆಯನ್ನು ಮುಂದುವರಿಸಿ ಯಶಸ್ವಿಯಾದರು. ಇವರ ಚಿಕಿತ್ಸೆಗೆ ಐ.ವಿ.¥sóï. (I.v.f) ಎಂದು ಹೆಸರು. ಈ ರೀತಿ ಜನಿಸುವ ಮಗುವಿಗೆ ಪ್ರನಾಳಶಿಶು ಎಂದು ಕರೆಯಲಾಯಿತು. ಇದರಿಂದ ಉತ್ತೇಜಿತರಾದ ಪ್ರಪಂಚದ ಲಕ್ಷಾಂತರ ಬಂಜೆ ದಂಪತಿಗಳು ಐ.ವಿ.ಎ¥sóï. ಚಿಕಿತ್ಸೆ ಬಳಸಿ ಪ್ರನಾಳಶಿಶುವನ್ನು ಪಡೆದು ಸಾರ್ಥಕತೆಯನ್ನು ಪಡೆದುಕೊಂಡಿದ್ದಾರೆ. 1978 ನೇ ಇಸವಿಯ ಜುಲೈ ತಿಂಗಳ 25ರಂದು ರಾತ್ರಿ 11 ಗಂಟೆ 47 ನಿಮಿಷಕ್ಕೆ ಪ್ರಪಂಚದ ಚೊಚ್ಚಲ ಪ್ರನಾಳಶಿಶು ಲೂಯಿ ಬ್ರೌನ್ ಎಂಬ ಹೆಣ್ಣುಮಗು ಇತರ ಶಿಶುಗಳಂತೆಯೇ ಸಹಜವಾಗಿ, ನಾನು ಗರ್ಭದಿಂದ ಹೊರಬಂದು ಸೂರ್ಯನ ಬೆಳಕು ಕಂಡೆ ಎಂದು ಜಗತ್ತಿಗೆ ಸಾರುವಂತೆ ಗಟ್ಟಿಯಾಗಿ ಅಳುತ್ತ ಜನಿಸಿತು. ಎಡ್‍ವಡ್ರ್ಸ್ ಮತ್ತುಸ್ಟೆಪ್‍ಟೊರ ಈ ಮಹತ್ವದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲು ನೊಬೆಲ್ ಸಮಿತಿಗೆ 32 ವರ್ಷಗಳು ಬೇಕಾಯಿತು. 2010ರಲ್ಲಿ ಈ ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪುಸ್ತಕದಲ್ಲಿ ಬಂಜೆತನದ ಬಗ್ಗೆ ಇರುವ ಮೂಢನಂಬಿಕೆಗಳು, ಬಂಜೆ ಹೆಣ್ಣುಮಗಳನ್ನು ಸಮಾಜ ನಡೆಸಿಕೊಳ್ಳುವ ರೀತಿ, ಬಂಜೆತನಕ್ಕೆ ಕಾರಣಗಳು, ಗಂಡು ಮತ್ತು ಹೆಣ್ಣು ಇಬ್ಬರೂ ಸಮನವಾಗಿ ಬಂಜೆತನಕ್ಕೆ ಕಾರಣರು, ಎಡ್‍ವಡ್ರ್ಸ್ ಮತ್ತು ಸ್ಟೆಪ್‍ಟೊರ ಸಂಶೋಧನೆಯ ಪ್ರತಿಯೊಂದು ಹಂತವನ್ನೂ ಜನಸಾಮಾನ್ಯ ಜನಸಾಮಾನ್ಯನಿಗೆ ಸುಲಭವಾಗಿ ಅರಿವಾಗುವಂತೆ ಸರಳ ಜನಪ್ರಿಯ ಭಾಷೆಯಲ್ಲಿ ವಿವರಿಸಲಾಗಿದೆ.

About the Author

ಎಂ.ಜೆ. ಸುಂದರ್ ರಾಮ್

ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್‌ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ...

READ MORE

Excerpt / E-Books

Related Books