ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳು

Author : ಎಚ್.ಡಿ. ಚಂದ್ರಪ್ಪಗೌಡ

Pages 379

₹ 85.00




Year of Publication: 2010
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು.

Synopsys

ಕಾಯಿಲೆಗಳ ಲಕ್ಷಣಗಳನ್ನು ತಿಳಿಯದೇ ಇರುವುದರಿಂದ ರೋಗಿಗಳು ಮತ್ತಷ್ಟು ಭೀತಿಗೊಳಗಾಗುವ ಸಂಭವವಿರುತ್ತದೆ. ಇದರಿಂದ, ಕೆಲವರು ಶೋಷಣೆಗೆ ಒಳಗಾಗುತ್ತಾರೆ. ಇಂತಹ ಅಪಾಯವನ್ನು ತಡೆಯುವ ಉದ್ದೇಶದೊಂದಿಗೆ ಡಾ. ಎಚ್.ಡಿ. ಚಂದ್ರಪ್ಪಗೌಡ ಅವರು ‘ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳು’ ಪುಸ್ತಕವನ್ನು ಬರೆದಿದ್ದಾರೆ.

ಕಾಯಿಲೆಗಳ ಉಗಮ, ಲಕ್ಷಣಗಳು, ಅವುಗಳ ಚಿಕಿತ್ಸಾ ವಿಧಾನ ಮುಂತಾದವುಗಳ ಬಗ್ಗೆ ವಿವರ ಮಾಹಿತಿ ಇದೆ. ಕಲ್ಲೊತ್ತು, ಉಗುರುಸುತ್ತು, ಮಚ್ಚೆಯಂತಹ ಸಣ್ಣ ಸಣ್ಣ ರೋಗಗಳ ಬಗ್ಗೆಯೂ ಇಲ್ಲಿ ಮಾಹಿತಿ ಇದೆ. ಶಸ್ತ್ರಚಿಕಿತ್ಸಾ ಪದ್ಧತಿಯ ಇತಿಹಾಸ, ಬೆಳೆದು ಬಂದ ಬಗೆ, ಈ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಇವೇ ಮುಂತಾದ ಮಾಹಿತಿಗಳ ಕಣಜ ಈ ಕೃತಿ. ಶಸ್ತ್ರಚಿಕಿತ್ಸೆಯಂತಹ ಜಟಿಲ ವಿಷಯವನ್ನು ಕನ್ನಡದಲ್ಲಿ ತೀರಾ ಸರಳವಾಗಿ ಬರೆದಿರುವುದು ಈ ಕೃತಿಯ ವೈಶಿಷ್ಟ್ಯ.

About the Author

ಎಚ್.ಡಿ. ಚಂದ್ರಪ್ಪಗೌಡ
(29 June 1929)

ಡಾ. ಚಂದ್ರಪ್ಪಗೌಡ ಎಚ್.ಡಿ ಅವರು  29-6- 1929 ಹೊಳೆಗದ್ದೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ವೈಜ್ಞಾನಿಕ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಎಚ್.ಡಿ. ಚಂದ್ರಪ್ಪಗೌಡ ಅವರು ಆರೋಗ್ಯದ ಕುರಿತಾಗಿ, ಮತ್ತು ಸೃಜನಶೀಲವಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಲೋಕದ ಕೌತುಕಗಳು, ಕುಸಿದುಬೀಳದಂತೆ ತಡೆಯುವುದು ಹೇಗೆ, ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕುವೆಂಪು ವೈದ್ಯ ಸಾಹಿತ್ಯ ಪುರಸ್ಕಾರ, ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಚ್.ಡಿ.ಚಂದ್ರಪ್ಪಗೌಡ ಅವರ ಮುಖ್ಯ ಕೃತಿಗಳು : ಜೋಸೆಫ್ ಆಸ್ಟರ್, ವೈದ್ಯವಿಜ್ಞಾನ ಸಾಧಕರು, ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ...

READ MORE

Related Books