
ಲೇಖಕಿ ಜ್ಯೋತಿ ಹಿಟ್ನಾಳ್ ಅವರ ಲೇಖನ ಕೃತಿ ʻಮುಟ್ಟು ಮತ್ತು ಆರೋಗ್ಯʼ. ಮುಟ್ಟು ಹೆಣ್ಣಿನ ದೇಹದಲ್ಲಿ ಜರಗುವ ಸ್ವಾಭಾವಿಕ ಪ್ರಕ್ರಿಯೆ. ಆದರೆ ಎಷ್ಟೋ ಜನರಿಗೆ ಇದರ ಆರೈಕೆ, ಆರೋಗ್ಯದ ಬಗ್ಗೆ ತಿಳಿದಿರುವುದಿಲ್ಲ. ಜೊತೆಗೆ ಮುಟ್ಟಿನೊಂದಿಗೆ ಮೈಲಿಗೆಯನ್ನು ಸೇರಿಸಿ ಸಾಮಾಜಿಕ ವ್ಯವಸ್ಥೆ ಹೆಣ್ಣಿನ ಬದುಕನ್ನು ಸಂಕೀರ್ಣಗೊಳಿಸಿದೆ. ಹಾಗಾಗಿ ಇಂತಹ ಮೂಢನಂಬಿಕೆಗಳನ್ನು ಪ್ರಶ್ನಿಸುತ್ತಾ, ಅದರಲ್ಲಿರುವ ಸತ್ಯಾಸತ್ಯತೆಗಳನ್ನು ಕೃತಿಯಲ್ಲಿ ಲೇಖಕರು ಅನಾವರಣಗೊಳಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರದಲ್ಲಿ, ಅಧ್ಯಯನ ಶಿಬಿರಗಳಲ್ಲಿ ವಿವಿಧ ಸ್ತರದ ಮಹಿಳೆಯರೊಂದಿಗೆ ನಡೆಸಿದ ಸಂವಾದಗಳಲ್ಲಿ ಕಂಡುಕೊಂಡ ಅನುಭವಗಳನ್ನು ಪುಸ್ತಕದಲ್ಲಿ ತಂದಿದ್ದಾರೆ. ಹದಿಹರೆಯದ ಹೆಣ್ಣುಮಕ್ಕಳು ಅನುಭವಿಸುವ ದೈಹಿಕ, ಮಾನಸಿಕ, ಸಾಮಾಜಿಕ ತೊಂದೆರೆಗಳ ಬಗ್ಗೆ ತಿಳುವಳಿಕೆ ನೀಡುತ್ತಾ ಅವುಗಳನ್ನು ಎದುರಿಸಲು ಬೇಕಾದ ಮನೋಸ್ಥೈರ್ಯ ಬೆಳೆಸಿಕೊಳ್ಳುವ ಬಗೆಯನ್ನೂ ವಿವರಿಸುವ ಒಂದು ಕೈಪಿಡಿಯಾಗಿದೆ.
©2025 Book Brahma Private Limited.