ಧೂಮಪಾನ ಬಿಡಿ...!

Author : ಸಿ.ಜಿ. ಕೇಶವಮೂರ್ತಿ

Pages 102

₹ 75.00




Year of Publication: 2014
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ , ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 080 2244 3996

Synopsys

ಧೂಮಪಾನ ಬಿಡಿ...! ಲೇಖಕ ಡಾ. ಸಿ.ಜಿ. ಕೇಶವಮೂರ್ತಿ ಅವರ ಕೃತಿ. ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ವಿಶ್ವವ್ಯಾಪಿ ಘೋಷಣೆಯಾಗಿದ್ದರೂ ಧೂಮಪಾನ ಸೇವನೆ ನಿಂತಿಲ್ಲ. ವಿಶೇಷವಾಗಿ ಯುವ/ಯುವತಿಯರಲ್ಲಿ ಈ ಪ್ರವೃತ್ತಿ ದಿನೇ ದಿನೆ ಹೆಚ್ಚುತ್ತಿದೆ. ಇದರ ಪರಿಣಾಮ, ಅವರು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಅನಾಹುತಗಳ ಕಡೆಗೆ ಯುವ ಸಮೂದಾಯವನ್ನು ಸೆಳೆಯಲು ಜಾಗೃತಿಯ ಕ್ರಮವಾಗಿ ಲೇಖಕರು ಈ ಕೃತಿಯನ್ನು ರಚಿಸಿದ್ದು, ಧೂಮಪಾನದಿಂದ ಹೃದ್ರೋಗಗಳ ಸ್ವರೂಪ ಇತ್ಯಾದಿ ಕುರಿತು ವಿವರಿಸಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಈ ಕೃತಿ ಉಪಯುಕ್ತವಾಗಿದೆ.

 

About the Author

ಸಿ.ಜಿ. ಕೇಶವಮೂರ್ತಿ
(14 April 1949)

ಮೂಲತಃ ಶಿವಮೊಗ್ಗದವರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ವೃತ್ತಿಯಿಂದ ವೈದ್ಯರು. ವೈದ್ಯಸಾಹಿತಿಯೂ ಹೌದು.ಮಂಗಳೂರಿನಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ನಡೆಸಿದ ಅವರು ಮೈಸೂರು ಮೆಡಿಕಲ್‌ ಕಾಲೇಜಿನಿಂದ (1974) ಎಂಬಿಬಿಎಸ್‌ ಪದವಿ ಪಡೆದರು. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.  ಕೃತಿಗಳು: ಭೂಮಪಾನ ಬಿಡಿ, ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ, ಹೃದ್ರೋಗ ಸಮಸ್ಯೆಗಳು-80 ಪ್ರಶ್ನೆಗಳು. . ...

READ MORE

Related Books