ಮಕ್ಕಳ ಪಾಲನೆ ಆರೋಗ್ಯ

Author : ಎಂ.ಡಿ. ಸೂರ್ಯಕಾಂತ

Pages 120

₹ 125.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: 15, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು
Phone: 9480686862

Synopsys

ಕಾಲ ಬದಲಾಗಿದೆ. ಗಂಡ, ಮನೆ, ಮಕ್ಕಳು, ಸಂಸಾರ, ನೋಡಿಕೊಳ್ಳುತ್ತಿದ್ದ ಹೆಣ್ಣುಮಗಳು ಮನೆಯ ಹೊರಗೆ ಕಾಲಿಟ್ಟು ದುಡಿದು ಸಂಪಾದಿಸಿ ಕುಟುಂಬಕ್ಕೆ ನೆರವಾಗುತ್ತಿದ್ದಾಳೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರಿಲ್ಲದೆ ಹೆತ್ತವರು ಕಂಗಾಲಾಗಿದ್ದಾರೆ. ಇಂದಿನ ಕಾಲದ ನವಜಾತ ಶಿಶುವಿನ ಹೆತ್ತವರು, ಪೋಷಕರು, ಶಿಕ್ಷಕರು, ಬೇಬಿ ಸಿಟ್ಟರ್‌ಗಳು ಅವಶ್ಯವಾಗಿ ಓದಬೇಕಾದ ಕೃತಿಯಿದು. ಅಪ್ಪ-ಅಮ್ಮ ಮಗುವಿಗೆ ಸುಮಾರು ಎಂಟು ತಿಂಗಳಾದ ನಂತರ ಅನಿವಾರ್ಯವಾಗಿ ದುಡಿಮೆಗೆ ಹೋಗಲೇಬೇಕಾದ ಸ್ಥಿತಿ ಇಂದಿನದು. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇನ್ನಿತರರದಾಗಿದ್ದು ಆತಂಕದ ಮೂಟೆ ಹೆತ್ತವರ ಬೆನ್ನ ಮೇಲಿರುತ್ತದೆ. ಹೆತ್ತವರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಅನೇಕ ಸಲಹೆ ಸೂಚನೆಗಳನ್ನೊಳಗೊಂಡ ಈ ಕೃತಿ ಇಂದಿನ ಕಾಲಕ್ಕೆ ಅತ್ಯುಪಯುಕ್ತವಾಗಿದೆ. ಶಿಶು ಜನನದಿಂದ ಮಗುವಿನ ಶಾಲಾದಿನಗಳವರೆಗೂ ಲೇಖನಗಳ ವಿಸ್ತಾರ ಹರಡಿದೆ.

About the Author

ಎಂ.ಡಿ. ಸೂರ್ಯಕಾಂತ

ಗೋವಾ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಎಂ. ಡಿ. ಸೂರ್ಯಕಾಂತ ಅವರು ಹವ್ಯಾಸಿ ಬರಹಗಾರರು. ಸಾಹಿತ್ಯದೆಡೆಗಿನ ಒಲವು ಮಕ್ಕಳ ಆರೋಗ್ಯ ಪಾಲನೆ ಕೃತಿ ರಚಿಸಲು ಸಹಕಾರಿಯಾಯಿತು. ಇವರು ಬಳ್ಳಾರಿಯ ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿಎಸ್, ಕಲಬುರ್ಗಿಯ ಎಂ. ಆರ್. ವೈದ್ಯಕೀಯ ಮಹಾವಿದ್ಯಾಲಯದಿಂದ ಮಕ್ಕಳ ಆರೋಗ್ಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರಾಗಿ ಸೇವೆ ನಂತರ, ಆರೋಗ್ಯ ಇಲಾಖೆಯ ಅಪರ ನಿದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ...

READ MORE

Related Books