
ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ? ಎಂಬುದು ಲೇಖಕ ಹಾಗೂ ವಿಜ್ಞಾನಿ ಡಾ. ಎಂ.ಎಸ್.ಎಸ್. ಮೂರ್ತಿ ಅವರ ಕೃತಿ. ಮಕ್ಕಳೇ ಮನೆಗೆ ಮಾಣಿಕ್ಯ. ಮನೆಗೊಂದು ಮಗುವಿರಲೆಂದೂ ಈ ಸಮಾಜ ಬಯಸುತ್ತದೆ. ಮಕ್ಕಳು ಇಲ್ಲದವರನ್ನು ಸಮಾಜ ತಿರಸ್ಕಾರದಿಂದ ಕಾಣುತ್ತದೆ. ಹಲವು ಕಾರಣಗಳಿಂದ ಬಂಜೆ ಎನಿಸಿಕೊಂಡ ಮಹಿಳೆಗೆ ಮಗುವನ್ನು ಪಡೆಯುವ ಸಾಧ್ಯತೆ ವೈದ್ಯಕೀಯ ರಂಗದ ಸಂಶೋಧನೆಗಳಿಂದ ಯಶಸ್ವಿಯಾಗಿದೆ. ಮಾತ್ರವಲ್ಲದೆ, ಬಂಜೆ ಎಂಬ ಪದ ಇದುವರೆಗೂ ಸ್ತ್ರೀಯರನ್ನಷ್ಟೇ ಉದ್ದೇಶಿಸಿ ಹೇಳಿದ್ದರೂ ಇದು ದಂಪತಿಗಳಿಬ್ಬರಲ್ಲೂ ಇರುವ ದೋಷ ಎಂದು ವೈದ್ಯಕೀಯ ವರದಿಗಳು ತಿಳಿಸುತ್ತವೆ. ಸಹಜ ಗರ್ಭಧಾರಣೆ ವಿಫಲವಾದ ಸಂದರ್ಭದಲ್ಲಿ ಇನ್ ವಿಟ್ರೊ ಫರ್ಟಿಲೈಸೇಶನ್ ಎಂಬ ವಿನೂತನ ವಿಧಾನ ದಂಪತಿಗಳಲ್ಲಿ ಆಶಾವಾದ ಮೂಡಿಸಿದೆ. ಇದನ್ನು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನವೆಂದು ಕರೆಯಲಾಗಿದ್ದು ವೈದ್ಯಕೀಯ ರಂಗದಲ್ಲಿ ಹೊಸ ಹೆಜ್ಜೆ ಮೂಡಿಸಿದೆ. ಮನುಕುಲವನ್ನು ಕಾಡುತ್ತಿರುವ ಬಂಜೆತನ ಎಂಬ ಸ್ಥಿತಿಯಿಂದ ಈಗ ಮುಕ್ತವಾದಂತೆ ಆಗಿದೆ.
©2025 Book Brahma Private Limited.