ಅಶ್ವಿನಿ ಸ್ಪರ್ಶ

Author : ಬಿ.ಟಿ. ರುದ್ರೇಶ್

Pages 194

₹ 200.00
Year of Publication: 2023
Published by: ಮಡಿಲು ಪ್ರಕಾಶನ
Address: ‘ಮಡಿಲು’, 54/ಇ, 2ನೇ ಅಡ್ಡರಸ್ತೆ, ಬನಶಂಕರಿ 3ನೇ ಹಂತ, 3ನೇ ಫೇಸ್‌, ೪ನೇ ಬ್ಲಾಕ್‌, ಕತ್ರಿಗುಪ್ಪೆ, ಬೆಂಗಳೂರು– 560085

Synopsys

ಅಶ್ವಿನಿ ಸ್ಪರ್ಶ ಕೃತಿಯು ನಾಡೋಜ ಬಿ.ಟಿ.ರುದ್ರೇಶ್‌ ಅವರ ಹೋಮಿಯೋಪತಿಯ ಉತ್ಕರ್ಷವಾಗಿದೆ. “ಹೋಮಿಯೋಪತಿ ಪದ್ಧತಿಯು ದೇಹ-ಮನಸ್ಸು-ಬುದ್ಧಿಯನ್ನು ಒಂದು ಘಟಕವೆಂದು ಪರಿಗಣಿಸುತ್ತದೆ. ಈ ಮೂರಕ್ಕೂ ಒಂದಕ್ಕೊಂದು ಸಂಬಂಧವಿದೆ ಚಿಕಿತ್ಸೆ ನೀಡುವಾಗ ಈ ಮೂರರ ಸಂಬಂಧವನ್ನು ವೈದ್ಯ ಪರಿಗಣಿಸಬೇಕು”. ಹೋಮಿಯೋ ಪದ್ಧತಿ ಬಗ್ಗೆ ಇರುವ ಅನೇಕ ಕಲ್ಪಿತ ಭಯ-ನಂಬಿಕೆಗಳ ಬಗ್ಗೆ ಅವರು ಖಡಕ್ ಉತ್ತರ ಕೊಟ್ಟಿದ್ದಾರೆ. ಇದು ರೋಗಿಗಳ ಪಾಲಿಗೆ ವರ ಎನ್ನುತ್ತಾರೆ. ಸಣ್ಣ ಕಾಯಿಲೆಯಿಂದ ಹಿಡಿದು ಮಾರಣಾಂತಿಕ ಕಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಪರಿಣಾಮಕಾರಿ ಚಿಕಿತ್ಸೆ ಇದೆ ಎಂಬುದನ್ನು ಸೋದಾಹರಣವಾಗಿ ತಿಳಿಸಿದ್ದಾರೆ. ಹತ್ತಕ್ಕೂ ಹೆಚ್ಚಿನ ಹೀಗೂ ಉಂಟೆ' ಎಂದು ಉದ್ಧರಿಸುವಂತೆ, ವಿಸ್ಮಯ ನೈಜ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಾಗೇ ಮಾಧ್ಯಮಗಳ ಜನಪರ ಪಾತ್ರ ಎಂಬ ಅಧ್ಯಾಯದಲ್ಲಿ ಪ್ರಸಕ್ತ ವೈದ್ಯಲೋಕದ ಹುಳುಕು ಕೊಳಕುಗಳನ್ನು ಅನಾವರಣ ಮಾಡಿದ್ದಾರೆ. ವೈದ್ಯರು ಆಸ್ಪತ್ರೆಗಳು ತಪಾಸಣೆ ಕೇಂದ್ರಗಳು, ಔಷಧಿ ಕಂಪನಿಗಳ ಅನೈತಿಕ ಸಂಬಂಧದ ಬಗ್ಗೆ ಕಟುವಾಗಿ ಆದರೆ ವಸ್ತುನಿಷ್ಠವಾಗಿ ಬರೆದಿದ್ದಾರೆ. ಎಲ್ಲ ಸಂಬಂಧಪಟ್ಟವರು ಮುಖ್ಯವಾಗಿ ವೈದ್ಯರು ಆತ್ಮಾವಲೋಕನ ಮಾಡಿಕೊಂಡು ಜನರಿಗೆ ಉಪಕಾರಿಗಳಾಗಲು ಮನವಿ ಮಾಡಿದ್ದಾರೆ. ಪುಸ್ತಕದ ಎರಡನೇ ಭಾಗದಲ್ಲಿ ತಮ್ಮ ವೈದ್ಯಯಾನದ ಮಜಲುಗಳ ವರದಿ ಸಂದರ್ಶನಗಳನ್ನು ಓದುಗರಿಗೆ ತೆರೆದಿಟ್ಟಿದ್ದಾರೆ. ಹಳ್ಳಿ ಹೈದನೊಬ್ಬ ತನ್ನ ಶ್ರಮ ಶ್ರದ್ಧೆಯ ದುಡಿಮೆಯಿಂದ ವೈದ್ಯಲೋಕದ ತ್ರಿವಿಕ್ರಮನಾಗಿ ಬೆಳೆದ ಪರಿಯನ್ನು ಬೆರಗನ್ನು ನಮ್ಮ ಮುಂದೆ ಇಟ್ಟಿದ್ದಾರೆ.

About the Author

ಬಿ.ಟಿ. ರುದ್ರೇಶ್

ಚಿಕ್ಕಮಗಳೂರು ಮೂಲದ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್. ಬೆಂಗಳೂರಿನಲ್ಲಿ ವಾಸವಿದ್ದಾರೆ.  ಕೃತಿಗಳು: ಬದುಕು-ಬೆಳಕು (ಅನುಭವ ಕಥನ), ಸಾಧನೆಯೇ ಬದುಕು (ವೈದ್ಯ ಜೀವನ ಕಥನ) ...

READ MORE

Related Books