‘ಪ್ಲಾಸ್ಟಿಕ್ ಪರಿಸರ’ ಡಾ.ಎಚ್.ಎಸ್. ಅನುಪಮಾ ಅವರು ಬರೆದ ಕೃತಿಯಾಗಿದೆ. ಇದನ್ನ ಪ್ಲಾಸ್ಟಿಕ್ ಸಮಸ್ಯೆಯ ಪರಿಹಾರಕ್ಕೆ ಪರ್ಯಾಯ ಪ್ರಯೋಗ ಎನ್ನುತ್ತಾರೆ ಲೇಖಕಿ. ಕೃತಿಯ ಕುರಿತು ಬರೆಯುತ್ತಾ 'ನಾವೇ ಸೃಷ್ಟಿಸಿದ ಕಸದ ಬಗೆಗೆ ನಮಗೆ ಎಷ್ಟು ಅಸಡ್ಡೆಯೆಂದರೆ ಅದನ್ನು ಮುಟ್ಟಲೂ ಅಸಹ್ಯ. ಕಸ ಎತ್ತಲೆಂದೇ ಒಂದು ಜಾತಿಯನ್ನು ರೂಪಿಸಿದ ಭಾರತೀಯ ಸಮಾಜ ನಮ್ಮದು. ಕಸ ಎತ್ತಿ ನಮ್ಮನ್ನು ಆರೋಗ್ಯವಂತರನ್ನಾಗಿ, ಶುಚಿಯಾಗಿ ಇಟ್ಟವರ ಬಗೆಗೆ ಕೃತಘ್ನರಾಗಿ ಅವರನ್ನೇ ಹೊರಗಿಟ್ಟವರು ನಾವು. ಶುಚಿತ್ವವನ್ನು ಮಡಿಮೈಲಿಗೆಯೆಂದು ಅಪಾರ್ಥಗೊಳಿಸಿದವರು. ಹೀಗಿರುತ್ತ ದೇಶದ ಯಾವ ಭಾಗಕ್ಕೇ ಹೋದರೂ ಮೂಲೆಮೂಲೆಗಳೂ ತಿಪ್ಪೆಗುಂಡಿಯಂತೆ ಕಾಣುವುದರಲ್ಲಿ ಏನು ಆಶ್ಚರ್ಯವಿದೆ? ಹೊರಗಣ ಕಸದ ಬಗೆಗಿನ ಧೋರಣೆಯೇ ಮನದೊಳಗಿನ ಕಸಕ್ಕೂ ಮುಂದುವರಿದಿರುವುದು ಎದ್ದು ಕಾಣುವಂತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕೃತಿಯಲ್ಲಿ ಜನರಲ್ಲಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
©2023 Book Brahma Private Limited.