
ವೈದ್ಯ ಸಾಹಿತಿ ಡಾ. ಎಚ್. ಗಿರಿಜಮ್ಮ ಅವರ ಕೃತಿ-ನಿಮ್ಮ ಮಗು. ತಾಯ್ತನವೆಂಬುದು ಪ್ರಕೃತಿ ಹೆಣ್ಣಿಗೆ ನೀಡಿರುವ ಕೊಡುಗೆ. ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಅಳುವ ಮಗು, ಸೃಷ್ಟಿಯ ಅದ್ಭುತಗಳಲ್ಲೊಂದು. ಗರ್ಭ ಧರಿಸುವುದರಿಂದಲೇ ತಾಯ್ತನದ ಹೊಣೆಗಾರಿಕೆ ಪ್ರಾರಂಭವಾಗುತ್ತದೆ. ನಿಮ್ಮ ಮಗುವನ್ನು ಪೋಷಿಸುವಲ್ಲಿ, ಮಗುವಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳ ಕುರಿತು, ಆಹಾರ ಮತ್ತು ಪಾಲನೆ - ಪೋಷಣೆ ಕುರಿತು ಈ ಕೃತಿಯಲ್ಲಿ ಅತ್ಯುತ್ತಮ ಸಲಹೆಗಳಿವೆ.
©2025 Book Brahma Private Limited.