ದಂತಾರೋಗ್ಯದ ರಹಸ್ಯ

Author : ಖಂಡಿಗೆ ಮಹಾಲಿಂಗ ಭಟ್

Pages 104

₹ 135.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ದಂತಾರೋಗ್ಯದ ರಹಸ್ಯ’ ಖಂಡಿಗೆ ಮಹಾಲಿಂಗ ಭಟ್‌ ಅವರ ಕೃತಿಯಾಗಿದೆ.ಹಲ್ಲು, ಒಸಡು, ದವಡೆಗಳ ಆರೋಗ್ಯವನ್ನು ಕಡೆಗಣಿಸಿದರೆ ಹಲವಾರು ಕಾಯಿಲೆಗಳನ್ನು ನಾವಾಗಿ ಆಹ್ವಾನಿಸಿದಂತೆಯೇ ಸರಿ. ಆಹಾರ ಸೇವಿಸಿದಾಗ ಬಾಯಿಯ ಸ್ವಚ್ಛತೆ ಸರಿಯಿಲ್ಲವಾದರೆ ಹಲವು ರೋಗಾಣುಗಳು ಆಹಾರದೊಂದಿಗೆ ದೇಹಕ್ಕೆ ಸೇರುವ ಸಾಧ್ಯತೆಯಿದೆ. ಅಲ್ಲದೆ ಆರೋಗ್ಯಪೂರ್ಣ ದಂತಪಂಕ್ತಿ ಮುಖಕ್ಕೆ ಸೌಂದರ್ಯವನ್ನೂ ನೀಡುತ್ತದೆ. ಹುಳುಕು ಹಲ್ಲುಗಳಿದ್ದು ಅದರಿಂದ ಬಾಯಿ ವಾಸನೆ ಇದ್ದಲ್ಲಿ ನಾವು ಎಲ್ಲರೊಂದಿಗೆ ಬೆರೆತು ಮಾತನಾಡಲೂ ಸಂಕೋಚ ಪಡುತ್ತೇವಲ್ಲವೆ? ಇಂದು ವೈದ್ಯಕೀಯ ಕ್ಷೇತ್ರದಲ್ಲಿ ದಂತಾರೋಗ್ಯದ ಬಗ್ಗೆ ಹಲವು ಸಂಶೋಧನೆಗಳಿಂದಾಗಿ ದಂತಕ್ಷಯದ ಬಗ್ಗೆ ಭಯ ಪಡಬೇಕಾಗಿಲ್ಲ. ಚಿಕಿತ್ಸೆಗೆ ಹೊಸ ಹೊಸ ವಿಧಾನಗಳಿವೆ. ಹಲ್ಲುಗಳ ಆರೋಗ್ಯದ ಬಗ್ಗೆ, ಕೃತಕ ಹಲ್ಲುಗಳ ಜೋಡಣೆ, ಸ್ಥಿರವಾಗಿ ಕೂರಿಸುವ ಹೊಸ ವಿಧಾನ ಫಿಕ್ಸ್ ಬ್ರಿಜ್, ಇಂಪ್ಲಾಂಟ್ ಆಧಾರಿತ ಹಲ್ಲು ಜೋಡಣೆ ಮುಂತಾಗಿ ನಿರಪಾಯಕಾರಿ ಚಿಕಿತ್ಸೆಯ ವಿವರಗಳನ್ನು ದಂತವೈದ್ಯ ಡಾ॥ ಖಂಡಿಗೆ ಮಹಾಲಿಂಗ ಭಟ್‌ ಈ ಕೃತಿಯಲ್ಲಿ ತಿಳಿಸಿದ್ದಾರೆ.

About the Author

ಖಂಡಿಗೆ ಮಹಾಲಿಂಗ ಭಟ್

ಖಂಡಿಗೆ ಮಹಾಲಿಂಗ ಭಟ್ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನುಹುಟ್ಟೂರಾದ ಕಾಸರಗೋಡು ತಾಲೂಕಿನ ನೀರ್ಚಾಲು ಎಂಬ ಚಿಕ್ಕ ಊರಿನ ಮಹಾಜನ ಸಂಸ್ಕೃತ ಕಾಲೇಜು ಹೈ ಸ್ಕೂಲ್ ಎಂಬ ಕನ್ನಡ ಮಾಧ್ಯಮ ಶಾಲೆಯಲ್ಲಿಮಾಡಿದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಸೇರಿ ಪಿ.ಯು. ಸಿ (1966-67) ಮತ್ತು ಬಿ. ಯಸ್.ಸಿ (1967-1970) ಪೂರೈಸಿದರು. ನಂತರ ಮಣಿಪಾಲ ದಂತವೈದ್ಯಕೀಯ ಕಾಲೇಜಿನಲ್ಲಿತಮ್ಮ ಸ್ನಾತಕ ಪದವಿಯನ್ನು (1970-1975) ಪಡೆದರು. 1977 ರಲ್ಲಿ ತಮ್ಮ ಮಾತೃ ಸಂಸ್ಥೆಯಲ್ಲಿ ಸಹಾಯಕ ಅಧ್ಯಾಪಕನಾಗಿ ಸೇರಿದರು; ಅಲ್ಲದೆ ಸ್ನಾತಕೋತ್ತರ ಪದವಿಯನ್ನೂ(1976-1981) ಗಳಿಸಿದರು. ಹಾಗು ಪ್ರಾಧ್ಯಾಪಕನಾಗಿ ಮುಂದುವರಿದರು. 1977 ರಿಂದ ...

READ MORE

Related Books