ಸುಖ ಸಂಪದ

Author : ಬಿ. ಎಂ. ಹೆಗ್ಡೆ

Pages 132

₹ 110.00




Published by: ನವಕರ್ನಾಟಕ ಪಬ್ಲಿಕೇಷನ್ಸ್‌
Address: 101, ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು- 560 001
Phone: 080 - 22161900

Synopsys

ಲೇಖಕ ಡಾ. ಬಿ ಎಂ ಹೆಗ್ಡೆ ಅವರ ಲೇಖನ ಕೃತಿ ʻಸುಖದ ಸಂಪದʼ. ಪುಸ್ತಕವು ಆರೋಗ್ಯಕರ ಜೀವನಕ್ಕಾಗಿ ಮಾಡಿದ ಕೈಪಿಡಿಯಾಗಿದೆ. ಇಲ್ಲಿ, ವೈದ್ಯ ವೃತ್ತಿ ಮತ್ತು ಇಂದಿನ ಕಾಲಕ್ಕೆ ಬೆಳವಣಿಗೆ ಹಾಗು ಬದಲಾವಣೆಗಳ ಜೊತೆಗೆ ಅತ್ಯಂತ ಸಾಮಾನ್ಯದಿಂದ ಹಿಡಿದು ಕ್ಲಿಷ್ಟವೆನಿಸುವ ರೋಗಗಳು ಮತ್ತು ಅವುಗಳನ್ನು ಗುಣಪಡಿಸುವ ವಿವರಣೆಗಳನ್ನು ಹೇಳಲಾಗಿದೆ. ಸೂಕ್ತ ಮಾಹಿತಿಯಿಂದ ಹೇಗೆ ರೋಗ ಲಕ್ಷಣಗಳನ್ನು ಗುರುತಿಸಬೇಕು ಹಾಗೂ ತಕ್ಕ ಪರಿಹಾರ ಕಂಡುಕೊಂಡು ಮತ್ತೆ ಬರದಂತೆ ಅಥವ ಇನ್ನೊಂದು ಕಾಯಿಲೆಗೆ ತಿರುಗದಂತೆ ಎಚ್ಚರ ವಹಿಸಬೇಕು ಎಂಬ ವಿಷಯಗಳ ಕುರಿತು ಸಾಮಾನ್ಯ ಜನರಿಗೆ ಅರ್ಥಮಾಡಿಸುವ ಕೆಲಸ ಈ ಪುಸ್ತಕದಲ್ಲಿ ನಡೆದಿದೆ. ಹಾಗಾಗಿ ಆರೋಗ್ಯದ ಬಗ್ಗೆ ತಿಳಿಯಲು, ಎಚ್ಚರವಹಿಸಲು ಈ ಕೃತಿಯು ಸಹಾಯಮಾಡುತ್ತದೆ.

About the Author

ಬಿ. ಎಂ. ಹೆಗ್ಡೆ

ಪ್ರೊ. ಬೆಳ್ಳೆ ಮೋನಪ್ಪ ಹೆಗ್ಡೆ ಅಥವಾ ಬಿ. ಎಂ. ಹೆಗ್ಡೆ ಅವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆದು ವೈದ್ಯ ವೃತ್ತಿಯಲ್ಲಿ ಹೃದಯ ತಜ್ಞರಾಗಿ ಹೆಸರಾದವರು. ಇವರು ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಾ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದ್ದಾರೆ. ಭಾರತೀಯ ವೈದ್ಯ ಸಂಘದಿಂದ ಕೊಡಲ್ಪಡುವ ಪ್ರತಿಷ್ಠಿತ ʻಪ್ರಖ್ಯಾತ ವೈದ್ಯ ಪ್ರಶಸ್ತಿʼಗೆ ಪಾತ್ರರಾದ ಇವರು ಬರಹಗಾರರು ಕೂಡ. ವಿಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ಹವ್ಯಾಸವನ್ನಿಟ್ಟುಕೊಂಡಿರುವ ಇವರು, ಆರೋಗ್ಯ ಮತ್ತು ಭಾಷಣ ಕಲೆಯ ಕುರಿತಾಗಿ ...

READ MORE

Related Books