
ಲೇಖಕ ಎ.ಎನ್ ನಾಗರಾಜ್ ಅವರ ‘ರೋಗನಿವಾರಕ ಜೀವನಶೈಲಿ’ ಕೃತಿಯು ಆರೋಗ್ಯ ಸಂಬಂಧಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ವ್ಯಾಯಾಮ, ಯೋಗ, ಧ್ಯಾನ, ಉಸಿರಾಟದ ವ್ಯಾಯಾಮ, ಆಹಾರ ಕ್ರಮ ಇತ್ಯಾದಿ ಮೂಲಕ ಅತಿತೂಕದ ಸಮಸ್ಯೆ, ಅರ್ಥರೈಟಿಸ್, ಅಸ್ತಮಾ, ಬೆನ್ನುನೋವು, ಮಧುಮೇಹ, ಅತಿ ರಕ್ತದೊತ್ತಡ, ಹೃದಯರೋಗ, ಕ್ಯಾನ್ಸರ್, ಒತ್ತಡ ಸಂಬಂಧಿ ಕಾಯಿಲೆಗಳು, ಆರೋಗ್ಯ ಸಮಸ್ಯೆಗಳು ಮತ್ತು ಇತರೆ ಸಮಸ್ಯೆಗಳ ಚಿಕಿತ್ಸೆಗಾಗಿ, ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಆರೋಗ್ಯ ಸಲಹೆಗಳನ್ನು ನೀಡುತ್ತದೆ. ಒಟ್ಟಾರೆ, ಆಹಾರ, ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದರ ಮೂಲಕ ಕಾಯಿಲೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದೆಂದು ಈ ಕೃತಿಯೂ ವಿವರಿಸುತ್ತದೆ.
©2025 Book Brahma Private Limited.