
ಸೌಂದರ್ಯ ವರ್ಧಕ ಮಾರುಕಟ್ಟೆ ಇಂದು ಬೃಹತ್ತಾಗಿ ಬೆಳೆದು ನಗರ ಮತ್ತು ಗ್ರಾಮೀಣದಲ್ಲಿ ತನ್ನ ಬಾಹುವನ್ನು ಚಾಚದೆ. ಅದು ಹೆಂಗೆಳೆಯರನ್ನು ಸುಲಭವಾಗಿ ಆಕರ್ಷಿಸಿ ಮತ್ತೊಂದು ಕೀಳರಿಮೆ ಸಮಸ್ಯೆಗೆ ನಾಂದಿ ಹಾಡುತ್ತಿದೆ. ಆರೋಗ್ಯವೇ ಸೌಂದರ್ಯ, ಅನಾರೋಗ್ಯವೇ ಕುರೂಪ ಎಂಬುದನ್ನು ಅರಿತುಕೊಂಡಾಗ ಕೃತಕ ಸೌಂದರ್ಯ ಸಾಧನಗಳ ಬಗೆಗಿನ ಆಕರ್ಷಣೆ ಕಳೆದು ಹೋಗುತ್ತವೆ ಮತ್ತು ಸುಂದರವಾಗಿರಲು ಸೌಂದರ್ಯ ಸಾಧನಗಳು ಏಕೆ ಬೇಕು ಎಂಬುದರ ಕುರಿತು ಸವಿವರವಾಗಿ ಲೇಖಕಿ ತಿಳಿಸಿದ್ದಾರೆ. ಆಯುರ್ವೇದ ತಜ್ಞೆ ಮತ್ತು ವೈದ್ಯಕೀಯ ಲೇಖನಗಳ ಮೂಲಕ ಖ್ಯಾತರಾಗಿರುವ ಡಾ. ವಸುಂದರಾ ಭೂಪತಿ ಅವರು ಸೌಂದರ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸರಳ ಆರೋಗ್ಯಕರ ವಿಧಾನಗಳನ್ನು ಇಲ್ಲಿ ನೀಡಿದ್ಧಾರೆ.
©2025 Book Brahma Private Limited.