
ಲೇಖಕ ಸಂತೋಷ ಕುಮಾರ್ ಮೆಹೆಂದೆಳೆ ಅವರ ಪ್ರವಾಸಕ್ಕೆ ಸಂಬಂಧಪಟ್ಟ ಲೇಖನಗಳ ಸಂಕಲನ ಕೃತಿ ʻಅಲೆಮಾರಿಯ ಡೈರಿʼ. ಕನ್ನಡ ಪತ್ರಿಕೆಯೊಂದಕ್ಕೆ ಸಂತೋಷ್ ಅವರು ಬರೆಯುತ್ತಿದ್ದ ಅಂಕಣಗಳನ್ನು ಒಟ್ಟುಸೇರಿಸಿ ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಬಹುತೇಕ ಪ್ರವಾಸಿಗರು ಹೋಗಲು ಅಂಜುವ, ಸುಲಭವಾಗಿ ಹೋಗಿಬರಲು ಸಾಧ್ಯವಾಗದಂತಹ ಸ್ಥಳಗಳ ಕುರಿತು, ಅವುಗಳ ವಿಶೇಷತೆಗಳನ್ನು ಇಲ್ಲಿ ಪರಿಚಯಿಸಿದ್ದಾರೆ. ದೇಶದ ಈಶಾನ್ಯ ಹಾಗು ಉತ್ತರ ಗಡಿ ಭಾಗದಲ್ಲಿರುವ ಸುಮಾರು 46 ಪ್ರವಾಸ ಜಾಗಗಳ ವಿವರಣೆ ಇಲ್ಲಿದೆ.
©2025 Book Brahma Private Limited.