
ಖ್ಯಾತ ಲೇಖಕ ಪರಂಜ್ಯೋತಿ (ಕೆಪಿ.ಸ್ವಾಮಿ) ಅವರು ಬರೆದ ಕೃತಿ-ಮದ್ಯಪಾನ. ಸಂತೋಷ-ವ್ಯಸನ ಯಾವುದು ಸರಿ? ಎಂಬುದು ಈ ಕೃತಿಗೆ ನೀಡಿದ ಉಪಶೀರ್ಷಿಕೆ. ಮದ್ಯಪಾನವು ಒಂದು ಸಾಮಾಜಿಕ ಪೀಡೆ. ಅನೇಕ ಸುಖೀ ಸಂಸಾರಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸುತ್ತದೆ. ಮಕ್ಕಳು ಮನೆಯ ಹಿರಿಯರನ್ನು ಅನುಸರಿಸಿ ಇದನ್ನು ಕಲಿತುಕೊಳ್ಳಬಹುದು. ವಿದ್ಯಾರ್ಥಿ, ಯುವಜನರು ತಮ್ಮ ಕುಡುಕ ಸ್ನೇಹಿತರಿಂದಲೊ ಅಥವಾ ಅವರ ಒಡನಾಟದಲ್ಲಿ ಇರಲೇಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಸ್ನೇಹಕ್ಕೆ ಕಟ್ಟುಬಿದ್ದು ಈ ದುಶ್ಚಟವನ್ನು ರೂಢಿಸಿಕೊಳ್ಳಬಹುದು. ಭಗ್ನ ಪ್ರಣಯಿಗಳು ಹತಾಶೆಯಿಂದಲೂ ಇದಕ್ಕೆ ಮೊರೆ ಹೋಗಬಹುದು. ಶ್ರೀಮಂತರು ಜಯಿಸಲಾಗದೆ ತಾತ್ಕಾಲಿಕ ಉಪಶಮನಕ್ಕಾಗಿ ಇದರ ದಾಸರಾಗಬಹುದು. ಒಮ್ಮೆ ಇದರ ಮಾಯಾಜಾಲದಲ್ಲಿ ಸಿಲುಕಿದರೆ ಇದರಿಂದ ಬಿಡುಗಡೆ ಹೊಂದುವುದು ಬಹಳ ಕಷ್ಟ. ವೈದ್ಯವಿಜ್ಞಾನದಲ್ಲಿ ಹಿತಮಿತವಾಗಿ ಬಳಸಲ್ಪಡುವ ಮದ್ಯದ ನಿರಂತರ ಸೇವನೆಯು ಜೀವಕ್ಕೆ ಮಾರಕವೂ ಆಗಬಲ್ಲದು. ಅಲ್ಪಕಾಲಿಕ ಉಪಶಮನಕ್ಕಾಗಿ ದೀರ್ಘಕಾಲದ ನೋವನ್ನು ತರುವ ಈ ಪಾನೀಯದ ಬಗ್ಗೆ ವಿವರಗಳನ್ನು ಈ ಕೃತಿಯು ನೀಡುತ್ತದೆ. ಅತಿ ಕುಡುಕತನವು ಮನುಷ್ಯನನ್ನು ಮನೆಯಿಂದ ಮಸಣಕ್ಕೆ ಅಟ್ಟುತ್ತದೆ. ಇಂತಹ ಭಯಂಕರ ಪೀಡೆಯನ್ನು ತೊಲಗಿಸಲು ಸಾಮಾಜಿಕ ಸುಧಾರಣಾ ಘಟಕಗಳು, ಸಾರ್ವಜನಿಕರು ಬೃಹತ್ ಆಂದೋಲನವನ್ನು ನಡೆಸಬೇಕು ಎಂಬುದೇ ಈ ಕೃತಿಯ ಸಂದೇಶ.
©2025 Book Brahma Private Limited.