ವಿಕಲತೆಗಳ ಪರಿಚಯ

Author : ಉಮೇಶ್. ಡಿ

Pages 226

₹ 250.00




Year of Publication: 2022
Published by: ಟೆಕ್‍ಫಿಜ಼್ ಇಂಕ್
Address: 60/46/2 10th b Main 1st Block Jayanagar Benglauru 560011
Phone: 9902026518

Synopsys

ವಿಕಲತೆಗಳ ಪರಿಚಯ, 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಗುರುತಿಸಿರುವ 21 ಬಗೆಯ ವಿಕಲತೆಗಳನ್ನು ಪರಿಚಯಿಸುವ ಹೊತ್ತಿಗೆಯಾಗಿದೆ. ಉಮೇಶ.ಡಿ ಅವರು ಸರಳ ಕನ್ನಡದ ಮೂಲಕ ವಿಕಲತೆಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಪುಸ್ತಕದಿಂದ ಸಾಮಾನ್ಯ / ವಿಶೇಷ ಡಿ.ಎಡ್, ಬಿ.ಎಡ್, ಎಂ.ಎಡ್, ಎಂ.ಎಸ್.ಡಬ್ಲ್ಯೂ ಸೇರಿದಂತೆ ಜನ ಸಾಮಾನ್ಯರು ಸಹ ಈ ಪುಸ್ತಕದಿಂದ ಅನುಕೂಲವನ್ನು ಪಡೆದುಕೊಳ್ಳಬಹುದು. ಪ್ರತಿ ವ್ಯಕ್ತಿಯು ಅನನ್ಯ. ವಿಕಲತೆಗಳ ಪರಿಚಯ ಪುಸ್ತಕದ ಮೂಲಕ ಅನನ್ಯತೆಯನ್ನು ಹೊಂದಿರುವ ವ್ಯಕ್ತಿಗಳ ಪರಿಚಯವನ್ನು ಶ್ರೀ. ಉಮೇಶ.ಡಿ ಅವರು ಮಾಡಿಕೊಟ್ಟಿದ್ದಾರೆ. ಇದು ವಿಕಲತೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಾರ್ಗದರ್ಶಿಕೆಯಾಗಿಯೂ ಜನ ಸಾಮಾನ್ಯರಿಗೆ ತಮ್ಮ ಕುಟುಂಬವನ್ನು ಕಾಳಜಿ ಮಾಡುವ ಕೈಪಿಡಿಯೂ ಆಗಿದೆ

About the Author

ಉಮೇಶ್. ಡಿ

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಒಂದು ದಶಕದ ಅನುಭವ ಉಮೇಶ.ಡಿ ಅವರದ್ದು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 2011ರಿಂದಲೂ ಉಪನ್ಯಾಸಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾರ್ಯಗಾರಗಳಲ್ಲಿ ಸಂಶೋಧನ ಲೇಖನಗಳನ್ನು ಮಂಡಿಸಿದ್ದಾರೆ. ತಮ್ಮ ಬ್ಲಾಗ್ ಮೂಲಕ ವಿಶೇಷ ಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸಿದ್ದಾರೆ. ಪುಸ್ತಕ ಲೋಕಕ್ಕೆ "ವಿಕಲತೆಗಳ ಪರಿಚಯ" ಇವರ ಮೊದಲ ಹೆಜ್ಜೆ. ...

READ MORE

Related Books