
ಆರೋಗ್ಯ ರಕ್ಷಣೆ ಮಾಡಿಕೊಳ್ಳದವರು ಕುಟುಂಬಕ್ಕೆ ಮತ್ತು ಸುತ್ತಮುತ್ತಲಿನ ಹೊರೆ ಎನ್ನಿಸಿ ಸೌಹಾರ್ದ ಜೀವನ ನಡೆಸುವುದು ಸವಾಲಾಗಿದೆ. ಇಂತಹ ಸವಾಲನ್ನು ಎದುರಿಸಲು ‘ನಾನು ದಾರಿ ತೋರಿಸುವೆ’ ಎನ್ನುತ್ತದೆ ಈ ಕೃತಿ. ಆರೋಗ್ಯದ ಗುಣ ಮಟ್ಟವನ್ನು ಕಾಪಾಡುವಲ್ಲಿ ಈ ಪುಸ್ತಕ ನೆರವಾಗುವುದಲ್ಲದೆ ಆಹಾರ ಎಂಬುದು ಆಹಾರ ಮಾತ್ರವಲ್ಲ ಔಷಧಿಯೂ ಹೌದು ಎಂಬುದನ್ನು ತಿಳಿಸುತ್ತದೆ.
ರಕ್ತ ಭಂಡಾರ, ನೇತ್ರ ಭಂಡಾರದಿಂದ ಹಿಡಿದು ವೈದ್ಯಕೀಯ ತಂತ್ರಜ್ಞಾನದ ನೂತನ ಆವಿಷ್ಕಾರವಾದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯವರೆಗೂ ಲೇಖನಗಳಿವೆ. ಸುಶ್ರುತ ಮತ್ತು ಸುಶ್ರುತ ಸಂಹಿತೆಯ ಕುರಿತು, ಪಂಚಕರ್ಮ ಚಿಕಿತ್ಸೆಯ ಕುರಿತು ವಿವರಣೆ ಇದೆ. ಮನೆಮದ್ದು ಮತ್ತು ಔಷಧಿಯ ಸಸ್ಯಗಳ ಬಗ್ಗೆ ವಿಸೃತವಾಗಿ ಮಾಹಿತಿ ಇದೆ.
©2025 Book Brahma Private Limited.