
ಲೇಖಕ ಟಿ.ಎಲ್. ನಂಜುಂಡಯ್ಯ ಅವರು ರಚಿಸಿದ ಕೃತಿ-ದಿವ್ಯ ಜೀವನ. ಸಾಮಾನ್ಯ ಬದುಕಿಗೊಂದು ದಿವ್ಯತೆಯ ಸ್ಪರ್ಶ ನೀಡುವುದು ನಮ್ಮ ಕೈಯ್ಯಲ್ಲೇ ಇದೆ.ಆಹಾರ ಸೇವನೆ, ನಿಯಮಿತ ವ್ಯಾಯಾಮ, ಯೋಗ ಮಾಡುವ ಮೂಲಕ ಬದುಕಿನ ಶಿಸ್ತನ್ನು ಹೆಚ್ಚಿಸಿಕೊಳ್ಳಬಹುದು. ಕ್ರಮಬದ್ಧತೆ ಇರದ ಬದುಕು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಯೋಗ, ಓದು, ಆಹಾರ ಸೇವನೆ, ವ್ಯಾಯಾಮ, ಉತ್ತಮ ವಿಚಾರ, ಸಹಕಾರ ಮನೋಭಾವದ ನಡೆತೆ ಇಂತಹ ನಡೆ-ನುಡಿಯಿಂದ ಬದುಕಿನ ಘನತೆ-ಗೌರವವನ್ನು ಹೆಚ್ಚಿಸಿಕೊಂಡು, ಸಾಮಾನ್ಯರನ್ನೂ ಮೀರುವ ಅಸಾಮಾನ್ಯ ಅಂದರೆ ದಿವ್ಯತೆಯ ಬದುಕನ್ನು ಸಾಗಿಸುವ ಸಾಮರ್ಥ್ಯ ಸಾಮಾನ್ಯನಿಗೂ ಇದೆ ಎಂಬುದನ್ನು ಈ ಕೃತಿಯು ತೋರಿಸಿಕೊಡುತ್ತದೆ.
©2025 Book Brahma Private Limited.