
ಮೃತ್ಯುಂಜಯ ಶ್ರೀ ರೂಸಿ ಎಂ. ಲಾಲಾ , ಮಾನವನ ಶರೀರದ ಮೇಲೆ ಮತ್ತು ಮನಸ್ಸಿನ ಮೇಲೆ ತನ್ನ ಭಯಾನಕ ಕರಿಯ ನೆರಳನ್ನು ಚೆಲ್ಲುವ ಕ್ಯಾನ್ಸರ್ ರೋಗವನ್ನು ಗೆದ್ದು ಬದುಕಿನಲ್ಲಿ ಸಂಭ್ರಮವನ್ನು ಆಚರಿಸಿಕೊಂಡವರು. ರೋಗವನ್ನು ಕುರಿತು, ರೋಗಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಶ್ನೆಗಳಿಗೆ ಸ್ವಲ್ಪವಾದರೂ ಉತ್ತರವನ್ನು ಧನಾತ್ಮಕ ರೀತಿಯಲ್ಲಿ ಅರಿತುಕೊಳ್ಳಲು, ರೋಗವನ್ನು ನಿಭಾಯಿಸಲು ಮತ್ತು ಹೊಸ ಜೀವನವನ್ನು ನಡೆಸಲು ಬೇಕಾದ ಉಪಯುಕ್ತವಾದ ಮಾಹಿತಿಯನ್ನು ಈ ಕೃತಿಯೂ ನೀಡುತ್ತದೆ. ಇತರರೊಡನೆ ಇರುವ ಸಂಬಂಧ, ದೇವರಲ್ಲಿನ ಅಚಲವಾದ ನಂಬಿಕೆ, ನಿಸರ್ಗ, ಆಹಾರ, ಕಾಯಕ, ಸೃಜನಶೀಲ ಮನಸ್ಸು ಇದಕ್ಕೆ ಸಹಾಯ ಮಾಡುವಲ್ಲಿ ಮುಖ್ಯವಾಗುತ್ತದೆ. ಹೀಗೆ ಹಲವು ಸಂಗತಿಗಳ ಕುರಿತ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.