
ಮನಸ್ಸು ನಮ್ಮ ಯಶಸ್ಸು ಮತ್ತು ವಿಫಲತೆಗಳಿಗೆ ಕಾರಣ. ನಮ್ಮ ಆರೋಗ್ಯ, ಅನಾರೋಗ್ಯದ ಮೇಲೂ ಮನಸ್ಸು ಬೀರುವ ಪ್ರಭಾವ ದೊಡ್ಡದು. ಒಂದು ಕ್ಷಣ ಪ್ರಫುಲ್ಲತೆ, ಮತ್ತೊಂದು ಕ್ಷಣ ಪ್ರಕ್ಷುಬ್ಧತೆ, ಇನ್ನೊಂದು ಕ್ಷಣ ಆಸೆ ನಿರಾಸೆ ಹೀಗೆ ತನ್ನನ್ನು ತಾನು ಅಸ್ಥಿರ ಛಾಯೆಯಡಿ ರೂಪುಗೊಳ್ಳುತ್ತಾ ಮುಂದೆ ಸಾಗುವ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಸಾಧಾರವಾದ ಮಾತಾದರೂ ಅಸಾಧ್ಯವೇನಲ್ಲ. ಚಂಚಲ ಆದರೂ ಅತ್ಯದ್ಭುತ ಸಾಮರ್ಥ್ಯವುಳ್ಳ ಮನಸ್ಸಿನ ಬಗ್ಗೆ ಇಲ್ಲಿ ಲೇಖಕ ಡಾ.ಸಿ.ಆರ್.ಚಂದ್ರಶೇಖರವರು ತಮ್ಮ ಯಥಾಶೈಲಿಯಲ್ಲಿ, ಸುಂದರ ಧಾಟಿಯಲ್ಲಿ ಈ ಕೃತಿಯಲ್ಲಿ ವಿವರಣೆಯನ್ನು ನೀಡಿದ್ದಾರೆ.
©2025 Book Brahma Private Limited.