
ಲೇಖಕ ಆಸೂರಿ ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ ʻಪ್ರಾಣಮುದ್ರಾʼ. ಪುಸ್ತಕವು ಯೋಗ ಅಭ್ಯಾಸದ ಮೂಲಭೂತ ವಿಧಗಳಾಗಿರುವ ಮುದ್ರೆಗಳ ಹಿಂದಿರುವ ವಿಜ್ಞಾನ ಹಾಗೂ ಅದರ ಆಧುನಿಕ ವೈದ್ಯಕೀಯ ಜ್ಞಾನಕ್ಕೆ ಪರ್ಯಾಯವಾದ ಯೋಗಶಾಸ್ತ್ರದ ಔಷಧ ರಹಿತ ಚಿಕಿತ್ಸಾ ವಿಧಾನವನ್ನು ವಿವರಿಸುತ್ತದೆ. ಪ್ರಾಣಾಯಾಮ ಮತ್ತು ಧ್ಯಾನ ಮಾಡುವಾಗ ಬಳಸುವ ಮುದ್ರೆಗಳು ಮನುಷ್ಯನ ಆರೋಗ್ಯದ ಮೇಲೆ ಹಲವಾರು ಪ್ರಯೋಜನೆಗಳನ್ನು ಬೀರುತ್ತದೆ. ಇದು ನೇರವಾಗಿ ಶಕ್ತಿಯನ್ನು ನಮ್ಮ ದೇಹದೊಳಕ್ಕೆ ಪ್ರವೇಶಿಸಲು ನೆರವು ಮಾಡಿ ಕೊಡುತ್ತದೆ. ಹಾಗಾಗಿ ʻಯೋಗದ ಅಂಶʼ ಎಂದು ಪರಿಗಣಿಸಲಾಗಿದೆ. ಈ ಪುಸ್ತಕವು ನಮ್ಮೆಲ್ಲ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳಿಗೆ ಸರಳವಾದ ಮತ್ತು ಅತ್ಯಂತ ಪ್ರಭಾವಿಯಾದ ಪ್ರಾಣಮುದ್ರೆಗಳ ಕುರಿತು ಹೇಳಿಕೊಡುತ್ತದೆ.
©2025 Book Brahma Private Limited.