ಬಸುತನಯ ಅವರ ’ಚಲುವ ಕನ್ನಡ ನಾಡು ಕೃತಿಯು ಮಕ್ಕಳ ಕವಿತೆಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಶಶಿಧರ ತೋಡಕರ ಅವರು, `ಪ್ರಾಚೀನ ಭಾರತದಲ್ಲಿ ಸೀಮಾತೀತವಾಗಿ ಕನ್ನಡ ಮತ್ತು ಕರ್ನಾಟಕದ ಗಡಿಗಳನ್ನು ಕನ್ನಡದ ವೀರರು ವಿಸ್ತರಿಸಿದ್ದರು. ’ಕನರನಾಟಕ ಬಲ’ ಎಂಬ ಹೆಸರಿನಿಂದ ಈ ವೀರರ ಪಡೆ ಗುರುತಿಸಿಕೊಂಡಿತ್ತು. ’ಕರ್ನಾಟಕ ಬಲ’ದ ಕುದುರೆಗಳು ದಾಹ ತೀರಿಸಕೊಳ್ಳಲು ಗಂಗಾ ನದಿಯ ನೀರನ್ನು ಕುಡಿಯುತ್ತಿದ್ದಂತೆ. ಅಂದು ಕುದುರೆಗಳಿಗೆ ಲಭ್ಯವಿದ್ದ ನೀರು ಇಂದು ಮನುಷ್ಯರಾದ ಕನ್ನಡಿಗರಿಗೆ ಹೋರಾಡಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೇನು ಕಾರಣವಿರಬಹುದು? ಬಹುಶಃ ಕರ್ನಾಟಕ ಬಲದ ಕೆಚ್ಚು ಇಂದಿನ ಕನ್ನಡಿಗ ನೆರೆಯಲ್ಲಿ ಇಲ್ಲದಿರುವುದು ಆಗಿರಬಹುದೇ? ಎನ್ನುವಂತಹ ಹಲವಾರು ವಿಚಾರಗಳನ್ನು ಒಳಗೊಂಡಿದೆ. ಶಿವಾನಂದ ಟವಳಿ ಅವರು ಪ್ರಸ್ತುತ ಕವನ ಸಂಕಲನದಲ್ಲಿ ಮಕ್ಕಳನ್ನೆ ದೃಷ್ಟಿಯಲ್ಲಿರಿಸಿಕೊಂಡು ಕನ್ನಡ ನಾಡು-ನುಡಿ-ಗಡಿ ಪರವಾದ ಅಭಿಮಾನದ ಕವಿತೆಗಳನ್ನು ಈ ಸಂಕಲನದಲ್ಲಿ ರಚಿಸಿದ್ದಾರೆ', ಎಂದಿದ್ದಾರೆ.
©2022 Book Brahma Private Limited.