ಅಮ್ಮಾ ಎಂದರೆ

Author : ಗುರುರಾಜ ಬೆಣಕಲ್

Pages 120

₹ 45.00
Year of Publication: 2019
Published by: ಸಾಹಿತ್ಯ ಪ್ರಕಾಶನ,
Address: ಸಾಹಿತ್ಯ ಪ್ರಕಾಶನ, ಕೊಪ್ಪಕರ್ ಬೀದಿ, ಹುಬ್ಬಳ್ಳಿ-580020
Phone: 0836236767

Synopsys

ಅಮ್ಮಾ ಎಂದರೆ ಮಕ್ಕಳ ಕವನಸಂಕಲನವನ್ನು ಗುರುರಾಜ್‌ ಬೆಣಕಲ್‌ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಶಕ್ತಿಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ಬೆಳೆಯುವ ಮಗು ಸುತ್ತಲಿನ ಜಗತನ್ನು ಖುಷಿಯಾಗಿ ಪರಿಚಯ ಮಾಡಿಕೊಳ್ಳುವ ಸಾಧನಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ತನ್ನ ತಂದೆ, ತಾಯಿ, ಹತ್ತಿರದವರು, ಪ್ರಾಣಿಗಳು, ಸೂರ್ಯ, ಚಂದ್ರ, ನಕ್ಷತ್ರ, ಹೂವು ಭಾಷೆ, ಎಲ್ಲ ಈ ಸಾಹಿತ್ಯದಿಂದ ಹತ್ತಿರರಾಗುತ್ತಾರೆ. ಸಂತೋಷದ ಮೂಲಕ ಮಗುವಿನ ಮನಸ್ಸನ್ನು ಅರಳಿಸುವ ಸಾಹಿತ್ಯವು ಮಗುವಿನ ವಯಸ್ಸು, ಕಲ್ಪನೆ, ಕಲಿಯುವ ರೀತಿ, ಖುಷಿಪಡುವ ರೀತಿ ಎಲ್ಲಕ್ಕೆ ಹೊಂದಿಕೊಳ್ಳಬೇಕು. ಆದುದರಿಂದಲೇ ಮಕ್ಕಳ ಸಾಹಿತ್ಯವು ಸಾಹಿತ್ಯದ ಒಂದು ವಿಶಿಷ್ಟ ರೂಪವಾಗಿದೆ. ಇಂತಹ ಸಾಹಿತ್ಯದ ಸಮರ್ಥ, ಸೊಗಸಾದ ಕೃತಿ ಇಲ್ಲಿದೆ ಎಂದು ಈ ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಗುರುರಾಜ ಬೆಣಕಲ್ - 09 April 2018)

ಗುರುರಾಜ ಬೆಣಕಲ್ ಅವರು ಮೂಲತಃ ಬಾಗಲಕೋಟೆಯವರು. ಮಕ್ಕಳ ಸಾಹಿತ್ಯವೂ ಒಳಗೊಂಡು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.  ಕೃತಿಗಳು: ಕತೆ ಹೇಳುವೆ, ಅಪೂರ್ವ ದಾನ, ಒಂದೂರಲ್ಲಿ...., ಬುದ್ಧಿವಂತ ಶಿಷ್ಯರು, ಹನಿ ಹನಿ ಮಿನಿ ಮಿನಿ ಕತೆಗಳು, ಕತೆಗಳೋ ಕತೆಗಳು, ಏನ್ ಕತೆ ಏನ್ ಕತೆ, ಗಿಣಿರಾಮ, ಕರಡೀ ಮದುವೆ, ಮಕ್ಕಳ ಕವಿತೆಗಳು, ಗಣಪ ಟೊಣಪ ಮತ್ತು ಮಕ್ಕಳ ಇತರ ಕವಿತೆಗಳು, ಹಾಡು ಹಕ್ಕಿ ಓಡಿ ಬಾರೆ, ಹೂವೇ ಹೂವೇ, ಒಗಟ ಬಿಡಿಸೊ ಜಾಣ ಎನಿಸೊ, ಪ್ರೇರಕ ಪ್ರಸಂಗಗಳು - ಬಾಳದಾರಿಯ ದೀಪಗಳು, ಓದಿವನಿಂದು ಪ್ರೇರಣೆಗೆಂದು, ಮಂಗನ ಮದುವೆ ಮತ್ತು ಮಕ್ಕಳ ಇತರ ...

READ MORE

Related Books