ನೂರು ಶಿಶುಗೀತೆಗಳು

Author : ಶ್ರೀರಾಮ ಇಟ್ಟಣ್ಣವರ

Pages 30

₹ 20.00
Year of Publication: 1995
Published by: ಮಿನಿ ಪ್ರಕಾಶನ
Address: ಸರೋಜ ಇಟ್ಟಣ್ಣವರ, ಬೀಳಗಿ 587116, ವಿಜಾಪುರ ಜಿಲ್ಲೆ

Synopsys

ಲೇಖಕ ಶ್ರೀರಾಮ ಇಟ್ಟಣ್ಣವರ ಅವರ ʼನೂರು ಶೀಶುಗೀತೆಗಳುʼ ಪುಸ್ತಕ ಮೌಲಿಕವಾಗಿ ರಚಿಸಿದ ಶಿಶು ಗೀತಾ ಸಾಹಿತ್ಯವಾಗಿದೆ. ಈ ಕೃತಿ ಓದುತ್ತಾ ಹೋದಂತೆ ಅವುಗಳ ಆಳದೆಡೆಗೆ ಮನಸ್ಸು ತಾನೇ ತಾನಾಗಿ ಇಳಿಯುತ್ತದೆ. ಶಿಶುಗೀತೆಗಳು ಶಾಲಾಪೂರ್ವ ತರಗತಿಯಲ್ಲಿರುವ ಮಕ್ಕಳ ವಯೋಮಾನಕ್ಕೆ ತಕ್ಕುದಾಗಿದೆ. ಈ ಗೀತೆಗಳಲ್ಲಿರುವ ಶಬ್ಧಲಾಲಿತ್ಯ, ಸರಳ ಶಬ್ಧಗಳ ಉಪಯೋಗ ಮಗುವಿನ ಆ ವಯಸ್ಸಿನ ಮಟ್ಟಕ್ಕೆ ಇಳಿಯುವ ಲೇಖಕರ ದಾರ್ಢ್ಯ ಮೆಚ್ಚುವಂತದು. ಮಕ್ಕಳ ಭವ್ಯ ಭವಿಷ್ಯವನ್ನು ಕವಿ ಕಂಡಿದ್ದಾನೆ. ಮಕ್ಕಳ ನರನಾಡಿಯಲ್ಲಿ ಗೀತೆಗಳನ್ನು ತುಂಬಲು ಉತ್ಸಾಹಿತನಾಗಿದ್ದಾನೆ, ಉದ್ಯುಕ್ತನಾಗಿದ್ದಾನೆ. ವಿಷಯ ಪ್ರಧಾನವಿಟ್ಟುಕೊಂಡು ತಯಾರಿಸಿ ಅನುಸರಿಸುವ ಇಂದಿನ ಪಾಠಕ್ರಮದಲ್ಲಿ ಈ ಪುಸ್ತಕವು ಪ್ರತಿ ಹೆಜ್ಜೆಯಲ್ಲಿ ಉಪಯೋಗ ಬೀಳುತ್ತದೆ. ಜನಪದ ಶಿಶು ಪ್ರಾಸಗಳನ್ನು ಬಿಟ್ಟರೆ, ಆಧುನಿಕ ಮಕ್ಕಳ ಸಾಹಿತ್ಯದಲ್ಲಿ ಚಿಕ್ಕಮಕ್ಕಳಿಗೆ ಸಂಬಂಧಪಟ್ಟ ಶಿಶು ಪ್ರಾಸ ರಚನೆ ಅಷ್ಟಾಗಿ ಕಾಣಬರುವುದಿಲ್ಲ. ಅಂಥ ಕೊರತೆಯನ್ನು ತುಂಬಿಕೊಡುವ ಒಂದು ಪ್ರಯತ್ನದ ಹಿನ್ನೆಲೆಯಲ್ಲಿ ಈ ಕವನ ಸಂಕಲನ ಬಂದಿದೆ.

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books