ಗೋಲಗುಮ್ಮಟ

Author : ರಾಜಶೇಖರ ಕುಕ್ಕುಂದಾ

Pages 56

₹ 30.00
Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 08022203580

Synopsys

‘ಗೋಲಗುಮ್ಮಟ’  ಲೇಖಕ ರಾಜಶೇಖರ ಕುಕ್ಕಂದಾ ಅವರು ಮಕ್ಕಳಿಗಾಗಿ ರಚಿಸಿದ ಕವಿತೆಗಳ ಸಂಕಲನ. ಇಲ್ಲಿಯ ಪ್ರಾಸಬದ್ಧ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಹಾಡಬಹುದು. ಮಕ್ಕಳ ಮನೋರಂಗದ ಕುತೂಹಲ, ವಿಸ್ಮಯ, ತರಲೆ-ತುಂಟಾಟಗಳೆಲ್ಲ ಇಲ್ಲಿಯ ಕವಿತೆಗಳ ವಸ್ತು. ಕಲಾವಿದ ಹರಿಣಿಯವರ ಚಿತ್ರಗಳು ಖುಷಿ ಕೊಡುತ್ತವೆ. ಕವಿತೆಗಳ ಅರ್ಥವಂತಿಕೆಯನ್ನು ಹೆಚ್ಚಿಸಿವೆ. 

About the Author

ರಾಜಶೇಖರ ಕುಕ್ಕುಂದಾ

‘ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಂಯೋಜಿತ ಪ್ರಾಧ್ಯಾಪಕರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.  ಕೃತಿಗಳು:  ಚೆಲುವ ಚಂದಿರ,  ಗೋಲಗುಮ್ಮಟ, ಮತ್ತು ಪುಟಾಣಿ ಪ್ರಾಸಗಳು (ಮಕ್ಕಳ ಕವನ ಸಂಕಲನಗಳು), ತಾಂತ್ರಿಕ ವಿಷಯಗಳ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕವಿತೆಗಳು ಸಿ. ಬಿ. ಎಸ್. ಇ. ಕನ್ನಡ ಭಾಷೆಯ ಪಠ್ಯದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ. ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ; ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ...

READ MORE

Reviews

ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವ ರಂಜನೀಯ ಕವಿತೆಗಳು

ಶಿಶುಗೀತೆ ರಚನೆಯಲ್ಲಿ ಹಲವು ವರ್ಷಗಳ ಕೃಷಿ ನಡೆಸಿರುವ ಲೇಖಕ 'ರಾಜಶೇಖರ ಕುಕ್ಕುಂದಾ' ಅವರ ಅನೇಕ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈ ಕವನಗಳ ಆಯ್ದ ಸಂಕಲನ ಇದು. ಮಕ್ಕಳ ಆಸಕ್ತಿ, ಆಕರ್ಷಣೆ, ಹುಡುಗಾಟಗಳು ಇವರ ಕವಿತೆಗಳ ಮೂಲಕ ತೆರೆದುಕೊಳ್ಳುತ್ತವೆ. ಸರಳವಾದ ಭಾಷೆ, ಪ್ರಾಸ, ಲಯಬದ್ಧತೆ ಹೊಂದಿದ ಕವಿತೆಗಳು ಎಲ್ಲರಿಗೂ ಮುದ ನೀಡುವಂತಿವೆ. ಮಗುವಿನ ಮನಸ್ಸಿನಲ್ಲಿ ಏಳುವ ಪ್ರಶ್ನೆ,

ಅಪ್ಪನು ತಪ್ಪನ್ನು
ಮಾಡಲೆ ಇಲ್ಲವೆ
ಸಣ್ಣವನಿರುವಾಗ?

ಅಪ್ಪಗೆ ಜಬರಿಸಿ
ಅಜ್ಜಿಗೆ ನೆನಪಿಸಿ
ಕೇಳುವರಾರೀಗ?

ಎಂದು.  ಅಡುಗೆ ಮನೆ ಕಡೆ ಹರಿಯುವ ಮಗುವಿನ 'ಚಂಚಲ ಮನಸ್ಸು' ಎಲ್ಲರ ಅನುಭವ ಕೂಡ. ಮಕ್ಕಳ ಮನೋವ್ಯಾಪಾರವನ್ನು ಬಂಡವಾಳ ಮಾಡಿಕೊಂಡು ರಚಿಸಿರುವ ಇಲ್ಲಿನ ಶಿಶುಗೀತೆಗಳು ನಿಜಕ್ಕೂ ರಂಜನೀಯ. ಆಸಕ್ತಿ ಹುಟ್ಟಿಸುವ ಕವನಗಳಿಗೆ ಪೂರಕವಾದ ಚಿತ್ರಗಳು ಕವನಗಳನ್ನು ಇನ್ನಷ್ಟು ರಂಜನೀಯಗೊಳಿಸಿವೆ.
- ಭಾರ್ಗವ
(ಸೌಜನ್ಯ: ಕನ್ನಡ ಪ್ರಭ, 20 ಜೂನ್ 2004)

Related Books