‘ಚಿಣ್ಣರ ಚಿಲಿಪಿಲಿಗಾನ’ ಹಿರಿಯ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ರಚಿಸಿರುವ ಮಕ್ಕಳ ಗೀತೆಗಳ ಸಂಕಲನ. ಇಲ್ಲಿನ ಬಹುತೇಕ ಹಾಡುಗಳನ್ನು ನಾಡಿನ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಪತ್ರಿಕೆಗಳವರು ಪ್ರಕಟಿಸಿದ್ದಾರೆ ಎನ್ನುತ್ತಾರೆ ಲೇಖಕ ಸಿದ್ಧಲಿಂಗಪ್ಪ. ಈ ಕೃತಿಯಲ್ಲಿ ಹೇಗೆ ಹೇಗೆ ಹೇಗೆ, ನನ್ನ ಹಾಡು, ನನ್ನ ಮನಸು ಬೆಳ್ಳಿಯ ಕನಸು, ಬೆಳಕು ಮೂಡಿತು, ಒಂದು ಗುಬ್ಬಿ ಇತ್ತಿತ್ತಂತೆ, ಚಂದ್ರ, ಬೆಣ್ಣೆಯ ಚಂದಿರ, ಗುಬ್ಬೀ ಗುಬ್ಬೀ, ಹೇಳ ಯಾರಮ್ಮ, ಪುಟ್ಟನ ಪ್ರಶ್ನೆ, ಏಕೊ ಏನೊ ಹಸಿವೇ ಇಲ್ಲ, ಅಮ್ಮ ಏಕೋ ಬೇಸರಾಗೈತೆ, ಅಮ್ಮ ನಾನೇನಾದ್ರೂ ತಂದ್ ಕೊಡ್ಲಾ, ಕಂದನ ಆರ್ಡರ್, ದೂರು, ಭೇದ, ತಿಮ್ಮ ಹನ್ಮ, ಆಟೋಮಾಮಗೆ, ಸ್ಕೂಲಿಗ್ಹೆಂಗೆ ಹೋಗ್ಲಪ್ಪ, ಮೇಡಂ ಬಂದ್ರು ಮೇಡಂ, ನಮ್ಮ ಮೇಡಂ, ಮಮ್ಮಿ ನಂಗೆ ಇಷ್ಟಕಣೆ, ನಮ್ಮಮ್ನಂತ ನಮ್ಮಿಸ್ಸಂತ, ಕನ್ನಡ ಕಲಿತ್ರೆ ಸನ್ಮಾನ, ಕನ್ನಡದಲ್ಲೇ ಓದಿದ್ರೆ, ಸುವರ್ಣಕನ್ನಡಹಾಡು, ರೈಲು, ನಾವು ಸಣ್ಣ ಮಕ್ಕಳು, ಶಿಸ್ತಿನ ಶಿವಪ್ಪ, ಹಸುವಿಗೆ, ಇಲಿಮರಿ ಇಲಿಮರಿ, ಉಗುರೇ ಬೆಳ್ಳಕ್ಕಿ ಅಂದ, ಬ್ಯಾಡವೇ, ಏಕೆ?, ನಾನೊಂದು ಒಗಟು ಹೇಳುವೆನಣ್ಣ, ಒಂದು ಮರದ ಮಾತು, ಢಂ ಢಮಾ ಢಂ, ಬನ್ನಿ ಗೆಳೆಯರೆ, ಶಾಸ್ತ್ರೀಯ ಸ್ಥಾನಮಾನ ಮತ್ತು ಸುಗ್ಗಿ ಸಂಕ್ರಾಂತಿ ಎಂಬ 40 ಮಕ್ಕಳ ಗೀತೆಗಳು ಸಂಕಲನಗೊಂಡಿವೆ.
©2023 Book Brahma Private Limited.