ಪಟ್‌ ಪಟೆಕಾಯಿ ಚಟ ಪಟ

Author : ವಿಜಯಶ್ರೀ ಹಾಲಾಡಿ

₹ 100.00
Year of Publication: 2022
Published by: ವಸಂತ ಪ್ರಕಾಶನ
Address: 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.

Synopsys

ಪಟ್‌ ಪಟೆಕಾಯಿ ಚಟ ಪಟ ವಿಜಯಶ್ರೀ ಹಾಲಾಡಿ ಅವರ ರಚನೆಯ ಕವಿತೆಗಳಾಗಿವೆ. ಮಕ್ಕಳಿಗೆ ಅವರದೇ ಖಾಸಗಿ ಜಗತ್ತುಂಟು, ಹಿರಿಯರು ನಮ್ಮ ಜಗತ್ತನ್ನು ಮಕ್ಕಳ ಮೇಲೆ ಹೇರಲು ನೋಡುತ್ತೇವೆ. ಮಕ್ಕಳಾದರೋ ಪ್ರಾಣಿ, ಪಕ್ಷಿಗಳ ಜಗತ್ತಿನ ತನ್ಯಯರಾಗಿ ಬೆರೆತು ಬೆಲೆ ಕಟ್ಟಲಾರದ ಸಂತೋಷ ಪಡೆಯುತ್ತಾರೆ. ವಿಜಯಶ್ರೀ ಹಾಲಾಡಿ ಮಕ್ಕಳ ಜಗತ್ತನ್ನು ಬೇಷರತ್ತಾಗಿ ಮಾನ್ಯ ಮಾಡುವ ಮಾತೃತ್ವದ ಮೂರ್ತಿ, ಅವರ ಪದ್ಯಗಳ ಹೊಸ ಭಂಗ, ನವೀನ ಕಲ್ಪಕತೆ, ಬೆರಗು ಪಡಿಸುವ ಚಿತ್ರಕಶು ಮಕ್ಕಳಗೆ ಪ್ರಿಯವಾಗುವುದರಲ್ಲಿ ಸಂದೇಹವೇ ಇಲ್ಲ. ಎಂದು ಡಾ. ಎಚ್‌. ಎಸ್‌, ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿಜಯಶ್ರೀ ಹಾಲಾಡಿ
(28 April 1975)

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು. ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) , ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ.    ...

READ MORE

Related Books