ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ-ಕಾಮನ ಬಿಲ್ಲು. ಒಟ್ಟು 51 ಕವಿತೆಗಳಿವೆ. ಅನೇಕ ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳ ಅಂಕಣಗಳಲ್ಲಿ ಪ್ರಕಟಗೊಂಡಿವೆ .ಸರಳ ಪದಗಳ ಹೆಣೆಯುವುದರೊಂದಿಗೆ ಅನೇಕ ವಿಷಯಗಳನ್ನು ಈ ಕಾವ್ಯಗಳಲ್ಲಿ ಹಿಡಿದಿಡಲು ಪ್ರಯತ್ನಿಸಲಾಗಿದೆ. ಹಸುರಿನ ಗಿಳಿ, ಜೀವನರೀತಿ, ಗುಲಾಬಿ ಹೂ, ಗುಬ್ಬಿಯ ಅಳಲು, ಗಣೇಶ ಪರ್ವ, ಜೀವನಕಲೆ, ಕೆಂಪುಸೂರ್ಯ, ಕಾರು, ಕೃಷ್ಣ, ಹಸಿರು ಕ್ರಾಂತಿ, ಪುಟ್ಟ ಇಲಿರಾಯ, ನಿಸ್ವಾರ್ಥಕಾಗೆ, ಸೊಳ್ಳೆ ಹೊನಲು, ರವಿಯ ಪ್ರಶ್ನೆ ..ನನ್ನ ವಿಚಾರ, ಕಾಗದದ ದೋಣಿ, ನನ್ನೂರು, ಅಜ್ಜಿಯ ಪ್ರೀತಿ, ಪುಸ್ತಕ ತಿರುಳು, ಮಕ್ಕಳಾಟ, ಪ್ರಳಯ, ನನ್ನ ಕನಸು, ಕನ್ನಡಿ ,ನಿಸರ್ಗ, ಇರುವೆಗೆ ,ನಮ್ಮ ತೋಟ ಹೀಗೆ ಮಕ್ಕಳಿಗೆ ಮುದ ನೀಡುವ ಮಕ್ಕಳ ಬೌದ್ಧಿಕತೆಯನ್ನು ವೃದ್ಧಿಸುವಂಥ ಕವಿತೆಗಳು ಇವು.
©2023 Book Brahma Private Limited.