ಮಕ್ಕಳಂಗಳದಲ್ಲಿ ಕಾವ್ಯ ತೊರೆ

Author : ಮಲ್ಲಿನಾಥ ಶಿ. ತಳವಾರ

Pages 108

₹ 80.00




Year of Publication: 2021
Published by: ಕವಿ ರಾಜಮಾರ್ಗ ಪ್ರಕಾಶನ
Address: ಮಾತ್ರೋಶ್ರೀ ಗೋದುತಾಯಿ ನಗರ, ಕಲಬುರ್ಗಿ 585102
Phone: 9886270075

Synopsys

ಮಕ್ಕಳಂಗಳದಲ್ಲಿ ಕಾವ್ಯ ತೊರೆ ಮಲ್ಲಿನಾಥ ಎಸ್‌ ತಳವಾರ ಅವರ ಕೃತಿಯಾಗಿದೆ. ಎ.ಕೆ. ರಾಮೇಶ್ವರ ಅವರು 90 ರ ಆಂಚಿನಲ್ಲಿರುವ ಹಿರಿಯ ಸಾಹಿತಿಗಳು, ಮಕ್ಕಳ ಸಾಹಿತ್ಯದ ಭೀಷನೆಂದೇ ಕೆಲವರು ಇವರನ್ನು ಕೊಂಡಾಡುತ್ತಾರೆ. ತನ್ನ ಮಕ್ಕಳ ಕನವಗಳು, ಕಥೆ, ಜೀವನ ಚರಿತ್ರೆ ನಾಟಕಗಳನ್ನು ಪಠ್ಯಪಸ್ತಕಗಳಲ್ಲಿ ಕಾಗದದ ದೋಣಿಯಂತೆ ಹರಿಬಿಡುತ್ತಲಿದ್ದು ಕನ್ನಡ ನಾಡಿನ ಪುಟಾಣಿಗಳ ಹೃದಯ ಸಾಮ್ರಾಟರಾಗಿದ್ದಾರೆ. ತಮ್ಮ ಸಾಧನೆಯ ಗುರಿ ತಲುಪಿ ಅನೇಕ ಮಾನ, ಸನ್ಮಾನ ಸತ್ಕಾರ, ಬಹುಮಾನ ಪ್ರಶಸ್ತಿಗಳನ್ನು ಸಂಪಾದಿಸಿ ಬಾಚಿಕೊಳ್ಳುವುದರೊಂದಿಗೆ ತಮ್ಮ ವಿದ್ಯಾಗುರುಗಳಾದ ಶ್ರೀ ಶಂ.ಗು. ಬಿರಾದಾರ ಅವರಿಗೆ ಅರ್ಪಿಸಿ ಋಣ ತೀರಿಸಲು ಪ್ರಯತ್ನಿಸಿದ್ದಾರೆ. ನಂದಿಕೋಲು, ವಸಂತಬಂದ, ಹಕ್ಕಿ ಹಾರುತಿದೆ. ಬನ್ನಿರಿ ಮನುಕುಲ ಚಂದಿರರೆ, ಚಂದ್ರ ಮೂಡಿಬಂದ, ಹುಲಿಯಹಾಲಿನ ಗಿಣ್ಣ, ದೇವಗಾರುಡಿಗ ಬೆಳಗುತಿರುವ ಭಾರತ, ಸುಲಿದಬಾಳೆಯ ಹಣ್ಣು, ಬೆಳಕು ನೀಡಿದ ಬಾಲಕರು ಸಂಕಲನಗಳನ್ನು ಪ್ರತಿಪದವನ್ನು ಬಿಡದೆ ಓದಿದ ಮಲ್ಲಿನಾಥ ತಳವಾರರು ಕವನದ ತಲೆ ಬರಹದ ಔಚಿತ್ಯ, ವಿಷಯ, ವೈಚಿತ್ರ, ಪ್ರಾಸ ಅರ್ಥ ಹಾಗೂ ಆಕರ್ಷಣೆಗಳನ್ನು ಬಿಚ್ಚಿ ತೋರಿಸುತ್ತಲೇ ಸಾರುವ ಸಂದೇಶವನ್ನು ಮನಂಬುಗುವಂತೆ ಎತ್ತಿತೋರಿಸಿದ್ದಾರೆ. ಸರಳ ಕವನಗಳನ್ನು ಇನೂ ಸರಳವಾಗುವಂತೆ ವಿವರಿಸುವ ಶಕ್ತಿಯನ್ನು ತಳವಾರರಿಂದ ಕಲಿಯಬೇಕೆನ್ನುವಂತೆ ಬರೆದಿದ್ದಾರೆ. ಲೇಖಕರ ಹೃದಯ, ಮನಸ್ಸು, ಬುದ್ಧಿ ಅಂತಃಕರಣಗಳು ಕವನಗಳಲ್ಲಿ ಮಕ್ಕಳ ಮನಸ್ಸನ್ನು ಸೆಳೆಯುವ ಶಬ್ದಗಳಾಗಿ ಹೇಗೆ ರೂಪಗೊಂಡಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಅವರ ವಿವರಣೆಯನ್ನು ಓದುವದೇ ಒಂದು ಸೊಗುಸು ಎಂಬಂತೆ ಕಾಣುತ್ತದೆ. ತಳವಾರರ ಚಿತ್ರಕ ಶೈಲಿ ತುಂಬಾ ಹೃದಯಂಗಮವಾಗಿದೆ ಎನ್ನುತ್ತಾರೆ ರವೀಂದ್ರ ಕರ್ಜಗಿ.

About the Author

ಮಲ್ಲಿನಾಥ ಶಿ. ತಳವಾರ
(11 July 1979)

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979)  ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ  ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.  ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...

READ MORE

Related Books