ಮಕ್ಕಳ ಸಂವೇದನೆಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗುವುದು ಸಹಜ. ಇಂದಿನ ಮಕ್ಕಳ ಆಶೋತ್ತರಗಳು, ಕನಸುಗಳು, ಅವರ ಮೇಲಿರುವ ಪರಿಸರದ ಒತ್ತಡ, ಪ್ರಭಾವ, ಅವರ ಒಲುಮೆ ನಿಲುಮೆಗಳು, ಖುಷಿ- ಕಷ್ಟಗಳು ಹಿಂದಿನಕ್ಕಿಂತಭಿನ್ನವಾಗಿವೆ. ಅದಕ್ಕೆ ತಕ್ಕಂಥ ಕವನಗಳು ಹಕ್ಕಿ ಗೂಡು ಕೃತಿಯಲ್ಲಿವೆ. ನಿಸರ್ಗದ ಚಿತ್ರಣದ ಮೂಲಕ ಪರಿಸರದ ಪ್ರೀತಿಯನ್ನು ಮೂಡಿಸುವ ಪ್ರಯತ್ನ, ವ್ಯಕ್ತಿ ಚಿತ್ರಣದ ಮೂಲಕ ಮೌಲ್ಯಗಳ ಪ್ರತಿಪಾದನಾ ಪ್ರಯತ್ನಗಳನ್ನು ಸೋಮಲಿಂಗ ಬೇಡರ ಅವರು ತುಂಬ ಕಾಳಜಿಪೂರ್ವಕವಾಗಿ ಮಾಡಿದ್ದಾರೆ. ಪ್ರಸ್ತುತ ಗಮನ ಸೆಳೆಯುವ ಕೃತಿಯಾದ ಹಕ್ಕಿ ಗೂಡು ಸಂಕಲನದಲ್ಲಿ ವೈಶಿಷ್ಟ್ಯತೆಯುಳ್ಳ ಮುವತ್ಮೂರು ಕವಿತೆಗಳಿವೆ.
©2023 Book Brahma Private Limited.