ಲೇಖಕ ಮೌಲಾಲಿ ಕೆ. ಆಲಗೂರ ಅವರ ಶಿಶುಗೀತೆಗಳ ಕೃತಿ ʻನಾವು ಭಾರತೀಯರುʼ. ಪುಸ್ತಕದ ಮುನ್ನುಡಿಯಲ್ಲಿ ಸಾಹಿತಿ ಡಾ. ನಾ. ಡಿಸೋಜ ಅವರು, “ಭಾರತಾಂಬೆಯ ಮುಂದೆ ನಾವೆಲ್ಲರೂ ಒಂದೇ, ಸಕಲ ಜೀವರಾಶಿಗಳಿಗೂ ಒಬ್ಬನೇ ತಂದೆ ಎಂದು ಪ್ರಾರಂಭದಲ್ಲಿಯೇ ಸಾರುವ ಕವಿ ನಮ್ಮ ದೇಶ ನಾಡು, ನೆಲ, ಜಲ, ಗಾಳಿ, ಅನ್ನ, ನೀರು ಇವುಗಳ ಮಹತ್ವ ಹೇಳುತ್ತಾ “ಕಾಯಕದಿ ನಿತ್ಯ ಕಾಣಬೇಕಿದೆ ದೇವರನ್ನ, ಕೋಮು ದ್ವೇಷವ ಮರೆತು ಎಳೆಯಬೇಕಿದೆ ದೇಶದ ಪ್ರಗತಿಯ ತೇರನ್ನು” ಎಂದು ಬರೆಯುತ್ತಾರೆ. ಇದೇ ಧಾಟಿಯಲ್ಲಿ ನಾವು ಭಾರತೀಯರು, ಕಟ್ಟೋಣ ಬನ್ನಿ ನಾಡೊಂದನ್ನು, ವಿಶ್ವಗುರು ಭಾರತ ಮೊದಲಾದ ಭಾವೈಕ್ಯತೆ ತಿಳಿಸುವ ಕವಿತೆಗಳನ್ನು ಅವರು ರಚಿಸಿದ್ದಾರೆ. ಕವಿ, ಮಕ್ಕಳು ಸಹಜವಾಗಿ ಆಕರ್ಷಣೆಗೆ ಒಳಗಾಗುವ ವಿಷಯಗಳ ಕುರಿತು ಗಮನ ಹರಿಸುತ್ತಾರೆ. ಅದು ಸಂಕ್ರಾಂತಿ, ಯುಗಾದಿ, ಹೋಳಿ ಓಕುಳಿ, ಸ್ನೇಹಿತರು, ಅಪ್ಪ, ಶಿಕ್ಷಕ, ದೀಪಾವಳಿ, ಸ್ವಾತಂತ್ರ್ಯ ಹಬ್ಬ ಕುರಿತು ಬರೆಯುತ್ತಾರೆ. ಎಲ್ಲ ಕವಿತೆಗಳಲ್ಲಿ ಮಕ್ಕಳಿಗೆ ಹಿಡಿಸುವ ಹಾಗೆ ಬರೆದಿದ್ದಾರೆ ಎಂಬುದೇ ಮುಖ್ಯ. ಕವಿತೆಗಳು ಇಡೀ ಕಟ್ಟುವುದರಲ್ಲಿ ಶೈಲಿ ಭಾಷೆಯಲ್ಲಿ, ಶಿಸ್ತು ಛಂದಸ್ಸಿನಲ್ಲಿ, ಧ್ವನಿಯಲ್ಲಿ ಯಶಸ್ಸನ್ನು ಪಡೆಯುವಂತೆ ಬರೆದಿದ್ದಾರೆ ಎನ್ನುವುದೇ ಮುಖ್ಯ” ಎಂದು ಹೇಳಿದ್ದಾರೆ.
©2023 Book Brahma Private Limited.