ಪುಟ್ಟಿ ಮತ್ತು ತೆಂಗಿನ ಮರ

Author : ಎಂ.ಆರ್. ದೇವರಾಜ್ (ನಿಸರ್ಗತನಯ)

Pages 120

₹ 120.00
Year of Publication: 2022
Published by: ನಿಸರ್ಗ ಪ್ರಕಾಶನ ಬಂಗಾರಪೇಟೆ
Address: #4062, ನಿಸರ್ಗ ಪ್ರಕಾಶನ, ವಿವೇಕಾನಂದನಗರ, ಬಂಗಾರಪೇಟೆ
Phone: 984527597

Synopsys

ಪುಟ್ಟಿ ಮತ್ತು ತೆಂಗಿನ ಮರ ಶಿಶುಗೀತೆಗಳು ದೇವರಾಜ್ ನಿಸರ್ಗತನಯ ಬಂಗಾರಪೇಟೆರವರ ನಾಲ್ಕನೇ ಕೃತಿಯಾಗಿದ್ದು ಇದರಲ್ಲಿ ಸರಿ ಸುಮಾರು 100 ಶಿಶುಗೀತೆಗಳಿದ್ದು, ಶಾಲಾಪರಿಸರ, ಪರಿಸರ ಜಾಗೃತಿ, ಭಾಷೆ, ನಾಡು ನುಡಿ, ದೇಶಪ್ರೇಮ, ಭಾವೈಕ್ಯತೆ, ಜಾತ್ಯತೀತ ಮನೋಭಾವವನ್ನು ಬಿಂಬಿಸುವ ಹಾಗೂ ಇವುಗಳಿಗೆ ರಾಗ ಕಟ್ಟಿ ಹಾಡಲು ಸುಲಭವಾಗಿರುವಂತಹ ಗೀತೆಗಳನ್ನು ಒಳಗೊಂಡಿದೆ.

About the Author

ಎಂ.ಆರ್. ದೇವರಾಜ್ (ನಿಸರ್ಗತನಯ)
(10 July 1976)

ನಿಸರ್ಗತನಯ ಕಾವ್ಯನಾಮಾಂಕಿತ ಕವಿ, ಬರಹಗಾರ ಎಂ.ಆರ್. ದೇವರಾಜ್ ಅವರು ಜನಿಸಿದ್ದು 1976 ಜುಲೈ 10ರಂದು. ತಂದೆ ರಾಮಪ್ಪ. ತಾಯಿ ಮೆಣಸಮ್ಮ. ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿರುವ ದೇವರಾಜ್ ಅವರು ಪ್ರವೃತ್ತಿಯಲ್ಲಿ ಬರಹಗಾರರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಬಂಗಾರಪೇಟೆ ತಾಲ್ಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಪಯಣ (ಕವನ ಸಂಕಲನ) ಹಾಗೂ ಚುಟುಕಾಮೃತ (ಚುಟುಕುಗಳ ಸಂಕಲನ) ಇವರ ಕೃತಿಗಳಾಗಿವೆ. ಕಣ್ಣಂಚಿನ ಬೆಳಕು ಹಾಗೂ ನನ್ನ ಕಥೆಗಳು ಕೃತಿಗಳು ಬಿಡುಗಡೆಯಾಗಲಿವೆ. ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ...

READ MORE

Related Books