ಕವಿ ಅಬಕರ ಎ. ಸನದಿ ಅವರ ಮಕ್ಕಳ ಕವನ ಸಂಕಲನ “ಕರುನಾಡ ಸಿರಿ”. ಇಲ್ಲಿಯ ಕವನಗಳು ಮಕ್ಕಳ ಭಾವನಾ ಪ್ರಪಂಚವನ್ನು ಪ್ರವೇಶಿಸಿವೆ. ಮಕ್ಕಳ ಕನಸುಗಳಿಗೂ ಅರ್ಥ ತಂದುಕೊಟ್ಟಿವೆ. ನಾಡು-ನುಡಿ, ದೇಶ ಭಕ್ತಿ, ಆಕಾಶ, ಪರಿಸರ, ಸಂಸ್ಕಾರ ಮತ್ತು ಏಕ್ಯತೆ ಕುರಿತ ಕವನಗಳು ಸರಳ ಶಬ್ದಗಳಿಂದ ಕೂಡಿದ್ದು, ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಮಕ್ಕಳು ಲಯಬದ್ಧವಾಗಿ ಹಾಡಿ ಕುಣಿದು ನಲಿಯುವಂತೆ ಕವನಗಳನ್ನು ಹೆಣೆಯಲಾಗಿದೆ ಎಂದು ಸ್ವತಃ ಗಾಯಕರಾಧ ಕವಿಗಳು ಹೇಳುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಕವಿತೆಗಳಿಗೆ ಚಿತ್ರಗಳ ಮೆರಗು ದೊರೆತಿದೆ.
©2022 Book Brahma Private Limited.