ತಲಲಂ ಪಂ ಪಂ

Author : ಶ್ವೇತಾ ಕಿಶೋರ ನರಗುಂದ

₹ 30.00




Year of Publication: 2009
Published by: ಜಡಭರತ ಪ್ರಕಾಶನ
Address: ಧಾರವಾಡ

Synopsys

‘ತಲಲಂ ಪಂ ಪಂ’ ಕೃತಿಯು ಶ್ವೇತಾ ನರಗುಂದ ಅವರ ಮಕ್ಕಳ ಸಂಕಲನವಾಗಿದೆ. ಕಳೆದ 2-3 ವರ್ಷಗಳಲ್ಲಿ ಅವರ ಸೃಜನಶೀಲ ಪ್ರಕ್ರಿಯೆ ಮಕ್ಕಳ ಓಲೈಕೆಯ ಹಿನ್ನೆಲೆಯಲ್ಲಿ ಅವರಿಗಾಗಿ ಗುನುಗುನುಸುತ್ತಿರುವ ಲಾಲಿ ಪದ್ಯಗಳ ಜೊತೆಗೆ ಶಬ್ದಗಳಲ್ಲಿ ಹಿಡಿದಿಟ್ಟು ಇತರರಿಗೂ ನೀಡುವಂತೆ ಇಲ್ಲಿ ಲೇಖಕಿ ಪ್ರಯತ್ನಿಸಿದ್ದಾರೆ ಅವರ ಶಬ್ಧಗಳ ಲಾಲಿತ್ಯ ಮಕ್ಕಳ ಜ್ಞಾಪಕ ಶಕ್ತಿಯ ವರ್ಧನೆಗೆ ಖಂಡಿತವಾಗಿಯೂ ಸಹಕಾರಿಯಾಗಬಲ್ಲದು. ‘ತಲಲಂ ಪಂ ಪಂ’ ಸಂಗ್ರಹ ಧ್ವನಿಯ ರಭಸದಲ್ಲಿಯೂ ಅರ್ಥ ಧ್ವನಿಗಳನ್ನು ಹುಟ್ಟಿಸುತ್ತಲೇ ಮಕ್ಕಳ ರಸಸಂಗ್ರಹಣಕ್ಕೆ ಪೂರಕವಾಗಿದೆ.

About the Author

ಶ್ವೇತಾ ಕಿಶೋರ ನರಗುಂದ
(01 February 1954)

ಲೇಖಕಿ ಶ್ವೇತಾ ಕಿಶೋರ ನರಗುಂದ ಅವರು 01-02-1954 ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಂ. ಎಸ್ಸಿ (ಹಾಸ್ಪಿಟಲ್ ಮ್ಯಾನೇಜ್‌ಮೆಂಟ್) ಪದವೀಧರರು. ತಂದೆ - ಚಿದಂಬರ ಜೋಶಿ, ತಾಯಿ - ಲಲಿತಾ ಜೋಶಿ. ಕೃತಿಗಳು: ಕಾತ್ಯಾಯನೀ ಅಮ್ಮನೂ ವೇಲು ಪಕ್ಷಿಯೂ (ಸಣ್ಣಕತೆ), ಹೇಮಗರ್ಭಾ, ಕಿಂಕಿಣಿ (ಕಾವ್ಯ), ತರರಂ ಪಂಪಂ (ಮಕ್ಕಳ ಕಾವ್ಯ) .  ಪ್ರಶಸ್ತಿ-ಗೌರವಗಳು: ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ, ಸುವರ್ಣ ಕರ್ನಾಟಕ ಪ್ರಶಸ್ತಿ(ಕಾಸರಗೋಡು ಸಾಹಿತ್ಯ ಪ್ರತಿಷ್ಠಾನ), ಸಿರಿಗನ್ನಡ ಪ್ರಶಸ್ತಿ (ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ) ಮುಂತಾದ ಪ್ರಶಸ್ತಿ-ಗೌರವಗಳು ಸಂದಿದೆ. ...

READ MORE

Related Books