ಗಿಲ್‌ ಗಿಲ್‌ ಗೆಜ್ಜಿ

Author : ಅಕಬರ ಎ ಸನದಿ

Pages 52

₹ 50.00
Year of Publication: 2013
Published by: ಇಂಚರ ಸಾಹಿತ್ಯ ಪ್ರಕಾಶನ
Address: # 4846 ಆದರ್ಶ ನಗರ, ಸಂಕೇಶ್ವರ, ಬೆಳಗಾವಿ ಜಿಲ್ಲೆ.
Phone: 8123813290

Synopsys

ʼಗಿಲ್‌ ಗಿಲ್‌ ಗೆಜ್ಜಿʼ ಕವಿ ಅಕಬರ ಎ. ಸನದಿ ಅವರು ಮಕ್ಕಳಿಗಾಗಿ ರಚಿಸಿದ ಪ್ರಾಸಪದ್ಯಗಳ ಸಂಕಲನವಿದು. ಭಾಷೆ ಸರಳವಾಗಿದ್ದು, ಮಕ್ಕಳ ಮನೋಲೋಕದ ಕಲ್ಪನೆಯನ್ನು ವಿಸ್ತರಿಸುವಲ್ಲಿ ಪೂರಕವಾಗಿವೆ. ಸಾಹಿತಿ ಬಿ. ಎಸ್.‌ ಗವಿಮಠ ಕೃತಿಗೆ ಬೆನ್ನುಡಿ ಬರೆದು ಮಕ್ಕಳ  ಸಾಹಿತ್ಯ ರಚನೆಯ ಕೊರತೆಯಿದ್ದು, ಸನದಿ ಅವರು ಇತ್ತ ಗಮನ ಹರಿಸಿದ್ದನ್ನು ಪ್ರಶಂಸಿಸಿದ್ದಾರೆ. 

 

About the Author

ಅಕಬರ ಎ ಸನದಿ

ಕವಿ ಅಕಬರ ಎ. ಸನದಿ ಅವರು ಬೆಳಗಾವಿ ತಾಲುಕಿನ ಶಿಂದೋಳ್ಳಿ ಗ್ರಾಮದವರು. ಸಂಕೇಶ್ವರದ ಹಿಂದೂಸ್ಥಾನ್‌ ಲೇಟೆಕ್ಸ್‌ ಕಾರ್ಖಾನೆಯಲ್ಲಿ ತಾಂತ್ರಿಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡ ಹೋರಾಟಗಾರರು.  ಕೃತಿಗಳು: ನಮ್ಮ ದೇಶ ಭಾರತ, ಗಿಲ್‌ ಗಿಲ್‌ ಗೆಜ್ಜೆ, ಕರುನಾಡ ಸಿರಿ, ಹಾಗೂ ಚೆಲುವ ಕನ್ನಡ ನಾಡು (ಮಕ್ಕಳ ಕವನ ಸಂಕಲನಗಳು) ನನ್ನವಳಿಗಾಗಿ (ಪ್ರೇಮದ ಮುಕ್ತಕಗಳ ಸಂಕಲನ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದು,  ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ...

READ MORE

Related Books