ನಲಿ ಕಲಿ

Author : ಚಂದ್ರಕಲಾ ಎಂ. ಪಾಟೀಲ್

Pages 135

₹ 125.00
Year of Publication: 2021
Published by: ಕಲಬುರಗಿ ಬರಹಗಾರರ ಸಂಘ
Address: ಅಶೋಕ ಅಂತಪನಾಳ, 11/82, ನಿಂಬರ್ಗಾ, ತಾಲೂಕು ಆಳಂದ, ಜಿಲ್ಲೆ: ಕಲಬುರಗಿ-585244

Synopsys

ಲೇಖಕಿ ಚಂದ್ರಕಲಾ ಎಂ. ಪಾಟೀಲ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನವಿದು. ಒಟ್ಟು 90 ಕವನಗಳನ್ನು ಸಂಕಲಿಸಲಾಗಿದೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಿ.ಎಂ. ನದಾಫ್ ಅವರು ‘ಇಲ್ಲಿಯ ಕವನಗಳು ಕವಯತ್ರಿಯ ಆರಂಭದ ರಚನೆಗಳು ಎಂದು ಕಾಣುವುದಿಲ್ಲ. ಕಾವ್ಯಾಸಕ್ತಿಯ ಹಾಗೂ ಜೀವನಾನುಭವದ ಅಭಿವ್ಯಕ್ತಿಯಾಗಿ ಕಾಣುತ್ತವೆ. ಕವನಗಳು ವಿಶ್ವಪ್ರಜ್ಞೆಯ ಆಲೋಚನೆಗಳನ್ನು ಒಳಗೊಳ್ಳುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಚಂದ್ರಕಲಾ ಎಂ. ಪಾಟೀಲ್
(08 August 1972)

ಕವಯತ್ರಿ ಚಂದ್ರಕಲಾ ಎಂ,ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಇಂಗಳಗಿ ಬಿ ಗ್ರಾಮದವರು. ಬಿ,ಎ,ಬಿ,ಇಡಿ ಪದವೀಧರರು. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಸರಕಾರಿ,ಪ್ರೌಢಶಾಲೆಯಲ್ಲಿ (ಸಮಾಜವಿಜ್ಞಾನ) ಸಹ ಶಿಕ್ಷಕಿಯಾಗಿದ್ದಾರೆ. ಮಕ್ಕಳಸಾಹಿತ್ಯ ಪರಿಷತ್ತಿನ ಅಫಜಲಪುರ ತಾಲೂಕು ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಫಜಲಪುರ ತಾಲೂಕು ವಲಯದ ಮಹಿಳಾ ಪ್ರತಿನಿಧಿಯಾಗಿ. ಗೈಡ್ಸ್ ಕ್ಯಾಪ್ಟನ್ ಆಗಿ. ಶಿಕ್ಷಕಿಯರ ವೇದಿಕೆಯ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷರಾಗಿ. ಕಲಬುರಗಿ ಜಿಲ್ಲೆಯ ಬರಹಗಾರರ ಬಳಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ನಲಿ ಕಲಿ (ಕವನ ಸಂಕಲನ), ಕಿಶೋರಿಯರು ಕಲಿಕೆಯಲ್ಲಿ ಹಿಂದುಳಿಯಲು ಕಾರಣ ...

READ MORE

Related Books